ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿನ ಬಾಲಕಿಯರ ಕಬಡ್ಡಿ ತಂಡ ಸತತ 2ನೇ ಬಾರಿಗೆ ರಾಷ್ಟ ಮಟ್ಟಕ್ಕೆ ಆಯ್ಕೆ ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ (ಆಡಳಿತ) ಚಿಕ್ಕಮಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಡೂರು ಹಾಗೂ ಕ್ಯಾಂಬ್ರಿಡ್ಜ್ ಪಬ್ಲಿಕ್ ಸ್ಕೂಲ್, ಕಡೂರು ಇಲ್ಲಿ ನಡೆದ 14 ರ ವಯೋಮಾನದ ಬಾಲಕಿಯರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕಲ್ಬುರ್ಗಿ, ಬೆಂಗಳೂರು ಹಾಗೂ ಬೆಳಗಾಂ ವಿಭಾಗದ ಎದುರು ಕ್ರಮವಾಗಿ 62,54,42 ಅಂಕಗಳ ಬೃಹತ್ ಮುನ್ನಡೆಯಲ್ಲಿ ದಿಗ್ವಿಜಯ ಸಾಧಿಸಿ ಸತತ 2 ನೇ ಬಾರಿಗೆ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿ ಪುತ್ತೂರಿನ ಕ್ರೀಡಾ ಕ್ಷೇತ್ರದ ಇತಿಹಾಸದಲ್ಲಿ ಹೊಚ್ಚ ಹೊಸ ದಾಖಲೆ ಬರೆದ ಲಿಟ್ಲ್ ಫ್ಲವರ್ ಶಾಲೆ, ದರ್ಬೆ ಪುತ್ತೂರು ಇಲ್ಲಿನ ಕಬಡ್ಡಿ ಕಲಿಗಳಿಗೆ ಅಭಿನಂದನೆಗಳು. ಭಾಗವಹಿಸಿದ ಮಕ್ಕಳು ಜು ಏನಾ ಡ್ಯಾಝಲ್ ಕುಟಿನ್ಹಾ, ಜೆನಿಟ ಸಿಂಧು ಪಸನ್ನ, ಸನ್ನಿಧಿ, ಸುಶ್ರಾವ್ಯ, ಹಾರ್ದಿಕ ಪಿ, ಜಶ್ಮಿತಾ, ಫಾತಿಮಾತ್ ಅಫ್ರ, ಫಾತಿಮಾತ್ ಶೈಮ, ಸಾಕ್ಷಿ, ನಮೃತಾ ಶೆಟ್ಟಿ, ಪೂರ್ವಿ ಕೆ, ಕೃತಿಕಾ, ಘನಶ್ರೀ, ಸಾಕ್ಷಿ ಹರೀಶ್ ಕಲ್ಲರ್ಪೆ. ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಮಾರ್ಗದರ್ಶನದಲ್ಲಿ, ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೆÇರ್ದಾಲ್ ತರಬೇತಿ ನೀಡಿದ್ದಾರೆ. ಶಿಕ್ಷಕಿ ವಿಲ್ಮಾ ಫೆನಾರ್ಂಡಿಸ್ ಸಹಕರಿಸಿದ್ದಾರೆ.

ಬಾಲಕೃಷ್ಣ ರೈ ಪೆÇರ್ದಾಲ್, ಸಹಶಿಕ್ಷಕರು
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ದರ್ಬೆ ಪುತ್ತೂರು

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]