ಸ್ಥಳೀಯ ನಾಗಾವಿ ನಾಡಿನ ಯುವ ಕಲಾಬಳಗ ಚಿತ್ತಾಪೂರ ಇವರ ಆಶ್ರಯದಲ್ಲಿ “ನಾಗಾವಿ ರಂಗೋತ್ಸವ” ಎಂಬ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಾಟಕ ಸ್ಪರ್ಧೆಯನ್ನು ದಿನಾಂಕ 22.08.2017ರಂದು ಏರ್ಪಡಿಸಲಾಗಿತ್ತು. ಈ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ತಂಡದವರು ನಾಟಕವನ್ನು ಪ್ರದರ್ಶನ ಮಾಡಿ ಪ್ರಥಮ ಸ್ಥಾನವನ್ನು ಪಡೆದು, ಮುಂದಿನ ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುವ ನಾಟಕ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಭಿನಂದನೆಗಳು!
Sr Kavitha BS, Headmistress
Bethany HS, Chittapur