Nov 22: ದಿ. 16/11/2018 ರಂದು ಬೆಥನಿ ಆಡಳಿತ ಮಂಡಳಿಯವರಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಂಡಳಿಯವರನ್ನು ಬ್ಯಾಂಡಿನ ಮುಖಾಂತರ ಕರೆತಂದು ಹೂ, ಪುಷ್ಪ, ಕುಂಭ, ಆರತಿ ಬೆಳಗುವ ಇತ್ಯಾದಿ ಭಾರತೀಯ ಸಂಸ್ಕøತಿಯ ಮೂಲಕ ಸ್ವಾಗತ ಕೋರಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಸ್ವಾಗತ ನೃತ್ಯ, ಭಾಷಣದ ಮೂಲಕ ಸ್ವಾಗತಿಸಲಾಯಿತು. ಮೌಲ್ಯಾಧಾರಿತ ನಾಟಕ, ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು. ಕೊನೆಗೆ ಬೆಥನಿ ಸಂಸ್ಥೆಯ ಮಹಾಮಾತೆಯ ಸಲಹೆಗಾರರು ಹಾಗೂ ಬೆಥನಿ ವಿದ್ಯಾಸಂಸ್ಥೆ, ಮಂಗಳೂರು ಇದರ ಕಾರ್ಯದರ್ಶಿಗಳಾದ ವಂದನೀಯ ಸಿ.ಮಾರಿಯಟ್ ಕಾರ್ಯಕ್ರಮ ಕುರಿತು ಮಾತನಾಡುತ್ತ ಬೆಥನಿ ಸಂಸ್ಥೆ ಸ್ಥಾಪನೆಯಾದುದರ ಉದ್ದೇಶವನ್ನು ತಿಳಿಸಿದರು. ಜೊತೆ ಜೊತೆಗೆ ಶಿಕ್ಷಣವೆಂದರೆ ಕೇವಲ ಪಾಠಗಳನ್ನು ಓದುವುದು ಮಾತ್ರವಲ್ಲದೆ, ಅದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದಾಗಿದೆ ಎಂದು ತಿಳಿಸಿಕೊಟ್ಟರು. ವಂದನಾರ್ಪಣೆಯಿಂದ ಕಾರ್ಯಕ್ರಮ ಮುಕ್ತಾಯಗೊಂಡಿತು.
ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿ ವರ್ಗ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ