Nov 23: ಮಕ್ಕಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಎಚ್ಚರಿಕೆ ನೀಡಿ, ಈ ಕುರಿತು ಇರುವಂತಹ ಕಾಯಿದೆ ಮತ್ತು ಮಕ್ಕಳ ಶಿಕ್ಷಣ ಕಾಯಿದೆ ಬಗ್ಗೆ ಮಾಹಿತಿ ನೀಡಲು ದಿ.10/11/2018ರ ಶನಿವಾರದಂದು ಚಿತ್ತಾಪೂರ ಪಟ್ಟಣದ ಖ್ಯಾತ ವಕೀಲರಾದ ಶ್ರೀ ಶರಣಗೌಡ ಪಾಟೀಲ ಅವರು ಬೆಥನಿ ಪ್ರೌಢ ಶಾಲೆಗೆ ಆಗಮಿಸಿದ್ದರು.
ಇವರು ಮಕ್ಕಳ ಶಿಕ್ಷಣ ಕಾಯಿದೆ (POCSO)ಯಡಿಯಲ್ಲಿ ಯಾವ ತರಹದ ಅಪರಾಧಗಳು ಬರುತ್ತವೆ, ಅವುಗಳನ್ನು ಆರಕ್ಷಕರ ಗಮನಕ್ಕೆ ತರುವುದು ಹೇಗೆ? ಮತ್ತು ಅಪರಾಧ ಸಾಬೀತಾದರೆ ಎಂತಹ ಶಿಕ್ಷೆಗೆ ಗುರಿಯಾಗಬಹುದು ಇತ್ಯಾದಿ ವಿಷಯಗಳನ್ನು ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಿಕೊಟ್ಟರು. ಶಾಲಾ ಶಿಕ್ಷಕ-ಶಿಕ್ಷಕೇತರ ವರ್ಗ ಹಾಗೂ ಪ್ರೈಮರಿ ಮತ್ತು ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಸಭೆಗೆ ಹಾಜರಾಗಿದ್ದರು.
ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿ ವರ್ಗ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ
ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿ ವರ್ಗ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ