April 08: ದಿನಾಂಕ 19-03-2022 ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರ “ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ” ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ಬೆಟ್ಟಿ ಡಿ’ಕೋಸ್ಟರವರು ವಹಿಸಿಕೊಂಡಿದ್ದರು. ಶಾಲೆಯ ಸಹ ಶಿಕ್ಷಕರಾದ ಶ್ರೀಯುತ ಪವನ್‍ಕುಮಾರ್‍ರವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ. ಸುಜಾತ ಮಡಿವಾóಪ್ಪ ಸಾಂಬ್ರಾಣಿ, ಪ್ರಧಾನ ಶ್ರೇಣಿ ಸಿವಿಲ್ ನ್ಯಾಯಾಧೀಶರು ಶ್ರೀಮತಿ. ಪವಿತ್ರ ಆರ್, ವಕೀಲ ಸಂಘದ ಅಧ್ಯಕ್ಷರಾದ ಶ್ರೀಯುತ ದಿಲೀಪ್, ವಕೀಲರಾದ ಎಸ್.ಕೆ. ಮಹೇಶ್, ಆಹಾರ ನಿರೀಕ್ಷಕರಾದ ಶ್ರೀಯುತ ಸುರೇಶ್ ಕೆ.ಪಿ, ಹಾಗೂ ವಿಚಾರ ಪ್ರಜ್ಞೆಯ ಸಂಪಾದಕರಾದ ರಾ. ಸುರೇಶ್‍ರವರು ಉಪಸ್ಥಿತರಿದ್ದರು.
ಮೊದಲಿಗೆ ಕಾರ್ಯಕ್ರವವನ್ನು ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ಸುಜಾತ ಮಡಿವಾಳಪ್ಪನವರು ಉದ್ಘಾಟಿಸಿ ಮಕ್ಕಳಿಗೆ ಗ್ರಾಹಕ ವಸ್ತುವನ್ನು ಖರೀದಿ ಮಾಡುವಾಗ ಯಾವ ರೀತಿ ಎಚ್ಚರ ವಹಿಸಬೇಕು ಮತ್ತು ಗ್ರಾಹಕ ಯಾವ ರೀತಿ ನ್ಯಾಯ ಪಡೆಯಬೇಕೆಂಬುದನ್ನು ವಿವರವಾಗಿ ತಿಳಿಸಿಕೊಟ್ಟರು. ನಂತರ ಪ್ರಧಾನ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ. ಪವಿತ್ರ ಆರ್. ರವರು ಆನ್‍ಲೈನ್ ಮೂಲಕ ವಸ್ತುಗಳ ಖರೀದಿಯಲ್ಲಿ ಆಗುವ ಲೋಪ – ದೋಷ, ಮೋಸ ಹಾಗೂ ಗ್ರಾಹಕ ವಹಿಬೇಕಾದ ಎಚ್ಚರಿಕೆಗಳನ್ನು ತಿಳಿಸಿಕೊಟ್ಟರು. ವಕೀಲರಾದ ಶ್ರೀಯುತ ಎಸ್.ಕೆ. ಮಹೇಶ್‍ರವರು ಗ್ರಾಹಕರ ಹಕ್ಕುಗಳ ರಕ್ಷಣೆಗೆ ನೆರವಾಗುವ ಕಾಯ್ದೆಗಳ ಬಗ್ಗೆ ಸರಕು - ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬೆಟ್ಟಿ ಡಿ’ಕೋಸ್ಟಾರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಸಹ ಶಿಕ್ಷಕರಾದ ಶ್ರೀಯುತ ಪ್ರಶಾಂತ್‍ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಸಹಶಿಕ್ಷಕಿ ಶ್ರೀಮತಿ ವೀಣಾರವರು ವಹಿಸಿಕೊಂಡಿದ್ದರು.
ಶ್ರೀಮತಿ. ವಿಶಾಲಾಕ್ಷಿ ಎಂ.ಎಸ್, ಸಹ ಶಿಕ್ಷಕರು
ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರ