Nov 17 : ಭಾರತ ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ ನೆಹರೂರವರ ಜನ್ಮದಿನವನ್ನು ನಾವು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಅಂತೆಯೇ ಚಿತ್ತಾಪೂರದ ಬೆಥನಿ ಪ್ರೌಢಶಾಲೆಯ ಸಭಾಂಗಣದಲ್ಲಿ ದಿನಾಂಕ 14/11/2022ರಂದು ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.

ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಮಹಾದೇವ ಸರ್‍ರವರು, ಮುಖ್ಯ ಅತಿಥಿ ಸ್ಥಾನವನ್ನು ಶ್ರೀ ಶರಣಗೌಡ ಪಾಟೀಲ, ಶ್ರೀ ಶಿವಕುಮಾರ , ಭಗಿನಿ ಕವಿತಾ, ಕು.ಅವಿನಾಶ (ಶಾಲಾ ಮುಖ್ಯಮಂತ್ರಿ), ಕು.ಖಾಸಿಂಬಿ (ಉಪ ಮುಖ್ಯಮಂತ್ರಿ) ಇವರುಗಳು ವಹಿಸಿಕೊಂಡಿದ್ದರು.

ಕಾರ್ಯಕ್ರಮವನ್ನು ಶಿಕ್ಷಕರ ಪ್ರಾರ್ಥನಾ ಕೂಟದೊಂದಿಗೆ ಆರಂಭಿಸಲಾಯಿತು. ಕು.ಅರುಣಕುಮಾರಿರವರು ನೆರೆದಿರುವ ಸರ್ವ ಅತಿಥಿ ಗಣ್ಯರನ್ನು ಹಾಗೂ ಮಕ್ಕಳನ್ನು ಸ್ವಾಗತ ಭಾಷಣ ಮತ್ತು ಮಾಲಾರ್ಪಣೆಯೊಂದಿಗೆ ಸ್ವಾಗತಿಸಲಾಯಿತು. ನೆಹರೂರವರ ಭಾವಚಿತ್ರಕ್ಕೆ ಅತಿಥಿಗಳು ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ಅಂದಿನ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಮಕ್ಕಳನ್ನು ಮನೋರಂಜಿಸಲು ಸರ್ವ ಶಿಕ್ಷಕರು ಮಕ್ಕಳಂತೆ ವರ್ತನೆಯಿರುವ ಮೌಲ್ಯಗಳುಳ್ಳ ನಾಟಕವನ್ನು ಹಾಗೂ ಸಾಮೂಹಿಕ ನೃತ್ಯವನ್ನು ಪ್ರದರ್ಶಿಸಿದರು. ಮಕ್ಕಳಿಗೆ ಅರಿವು, ತಿಳಿವಳಿಕೆ ಜ್ಞಾನ ವೃದ್ಧಿಸಿಕೊಳ್ಳುವಂತಹ ನುಡಿಗಳನ್ನೊಳಗೊಂಡ ಗೀತೆಯನ್ನು ಸರ್ವ ಶಿಕ್ಷಕರು ಹಾಡಿದರು.

ಅತಿಥಿಗಳಾದ ಶ್ರೀ ಶಿವಕುಮಾರ ರವರು ಕಥೆಯ ಮುಖಾಂತರ ಮಕ್ಕಳಿಗೆ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿದರು. ಅಧ್ಯಕ್ಷರಾದ ಶ್ರೀ ಮಹಾದೇವ ಸರ್‍ರವರು ತಮ್ಮ ಭಾಷಣದಲ್ಲಿ ಮಕ್ಕಳಿಗೆ ತಂದೆ-ತಾಯಿಯ ಮಹತ್ವವನ್ನು ತಿಳಿಸಿದರು. ಕು.ಅವಿನಾಶ ತನ್ನ ಭಾಷಣದಲ್ಲಿ ನೆಹರೂರವರ ಬಗ್ಗೆ ವಿವರಿಸಿ, ತನ್ನ ಶಾಲೆ, ಶಿಕ್ಷಕರ ಬಗ್ಗೆ ಅಭಿಮಾನದ ನುಡಿಗಳನ್ನು ಹೇಳಿದನು. ಕೊನೆಗೆ ಈ ಕಾರ್ಯಕ್ರಮವು ಸಹಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಕುಂಬಾರರವರ ವಂದನಾರ್ಪಣೆಗಳೊಂದಿಗೆ ಸಮಾಪ್ತಿಯಾಯಿತು.

 

 

 

 

ಕು.ಅರುಣಕುಮಾರಿ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]