June 14: ಪೃಕೃತಿಗೂ ಮಾನವನಿಗೂ ಗಾಢವಾದ ಸಂಬಂಧವಿದೆ. ಮಾನವ ಪೃಕೃತಿಯಲ್ಲಿ ಜನಿಸಿ, ಪೃಕೃತಿಯಲ್ಲೇ ಬದುಕಿ ಕೊನೆಗೆ ಪೃಕೃತಿಯ ಮಡಿಲಲ್ಲಿ ಮಣ್ಣಾಗಿ ಹೋಗುತ್ತಾನೆ. ತನಗೆ ಬೇಕಾದುದೆಲ್ಲವನ್ನು ಪೃಕೃತಿಯಿಂದಲೇ ಪಡೆಯುತ್ತಾನೆ. ಹೌದು, ಸೇಕ್ರೆಡ್ ಹಾರ್ಟ್ ಹಿರಿಯ ಪಾಥಮಿಕ ಶಾಲೆಯಲ್ಲಿ, ಮಾನವನಿಗೆ ಪೃಕೃತಿಯ ನಿಸ್ವಾರ್ಥ ಕೊಡುಗೆಯನ್ನು ಸ್ಮರಿಸುತ್ತಾ ಶಾಲೆಯ ಸಂಚಾಲಕಿಯಾದ ಸಿಸ್ಟರ್ ಮಧು, ಮುಖ್ಯಶಿಕ್ಷಕಿಯರಾದ ಸಿಸ್ಟರ್ ಮಾರ್ಗರೇಟ್ ಹಾಗೂ ಸಿಸ್ಟರ್ ಮೇರಿ ಲೋಪಿಸ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸೇರಿ “ಪರಿಸರ ದಿನ”ವನ್ನು ಗಿಡ ನೆಡುವುದರೊಂದಿಗೆ ಅರ್ಥಭರಿತವಾಗಿ ಆಚರಿಸಿದರು. ಈ ವರ್ಷದ ಅಂತರಾಷ್ಟ್ರೀಯ ಧ್ಯೇಯ “ಒಂದೇ ಒಂದು ಭೂಮಿ” ಇದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮುಖ ್ಯಶಿಕ್ಷಕಿ ಸಿಸ್ಟರ್ ಮೇರಿ ಲೋಪಿಸ್‍ರವರು ತಿಳಿಸಿದರು. ಗೊತ್ತಿದ್ದರೂ ಕಣ್ಣು ಮುಚ್ಚಿಕೊಂಡಿದ್ದ ನಮಗೆ , ಕೊರೋನ ಎಂಬ ಮಹಾಮಾರಿ, ಜೀವನದ ಅದರಲ್ಲೂ ಆಮ್ಲಜನಕದ ಅವಶ್ಯಕತೆ ನಮಗೆ ಎಷ್ಟಿದೆ ಎಂಬುದನ್ನು ಅರಿವಿಗೆ ತಂದಿದೆ. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಳ್ಳೋಣ ಗಿಡಗಳನ್ನು ನೆಡೋಣ ಎಂದು ಸಾರಿ ಹೇಳಿದರು. ವಿದ್ಯಾರ್ಥಿಗಳಿಗೆ ಗಿಡ ನೆಡುವುದು ಮಾತ್ರವಲ್ಲದೆ, ಪರಿಸರದ ಚಿತ್ರ ಬಿಡಿಸಲು ತಿಳಿಸಿದರು. ಹಾಗೂ ಅವರು ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಶಿಕ್ಷಕಿ ಸುನೀತಾರವರು ಈ ದಿನದ ಮಹತ್ವ ಹಾಗೂ ವಿಶೇಷತೆ ಕುರಿತು ಮಾತುಗಳನ್ನಾಡಿ ಗಿಡಗಳನ್ನು ನೆಡಲು ಪ್ರೋತ್ಸಾಹಿಸಿದರು.
ಕುಮಾರಿ ಸುನೀತಾ
ಸೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ, ಬಸರೀಕಟ್ಟೆ