Nov 29: ನವೆಂಬರ್ ತಿಂಗಳು ಬಂತೆಂದರೆ ಎಲ್ಲೆಲ್ಲೂ ಸಂಭ್ರಮ ಸಡಗರ. ಅದಕ್ಕೆ ಕಾರಣ ನವೆಂಬರ್ 14 ಮಕ್ಕಳ ದಿನಾಚರಣೆ. ಈ ತಿಂಗಳು ಹಿರಿಯರು ಕಿರಿಯರಂತೆ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕುತ್ತಾ ಮಕ್ಕಳ ಲೋಕದಲ್ಲಿ ತಾವು ಮಕ್ಕಳಾಗಿ ನಡೆಯುವ ಕ್ಷಣ ಅದ್ಭುತ. ಈ ಕ್ಷಣಕ್ಕಾಗಿ ನಾವು ಪ್ರತಿ ವರ್ಷವೂ ಕಾಯುತ್ತಲೇ ಇರುತ್ತೇವೆ. ಪ್ರತಿ ವರ್ಷದಂತೆ ಈ ವರ್ರ್ಷವೂ ಕೂಡ ಶಿಶುವಿಹಾರ ಶಾಲೆಯಲ್ಲಿ ನವಂಬರ್ 14ರಂದು ಪಂಡಿತ್ ಜವಾಹರಲಾಲ್ ನೆಹರು ರವರ ಜನ್ಮದಿನದ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯೋಪಾಧ್ಯಾಯಿನಿ ಭಗಿನಿ ಅವಲಿನ್ ಅವರ ನೇತೃತ್ವದಲ್ಲಿ ಸರ್ವ ಶಿಕ್ಷಕ ವೃಂದದವರು ಸೇರಿ ಹಾಡಿ ನಲಿದ ಸಂದರ್ಭ ನಮಗೆ ಅತ್ಯಂತ ಖುಷಿ ನೀಡಿದೆ. ಮಕ್ಕಳ ಸಂತೋಷಕ್ಕಾಗಿ ಹೆಜ್ಜೆ ಹಾಕಿದ ಅವರ ನೃತ್ಯ ಹಾಗೂ ಮಕ್ಕಳಲ್ಲಿ ಮೌಲ್ಯವನ್ನು ಬೆಳೆಸುವುದಕ್ಕಾಗಿ ಪ್ರೇರಣೆ ನೀಡಿದ ಅವರ ನಾಟಕಗಳು ನಮ್ಮ ಜೀವನಕ್ಕೆ ಸ್ಪೂರ್ತಿಯಾಗಿವೆ. ಇಂತಹ ಅದ್ಭುತ ಕಾರ್ಯಕ್ರಮ ನೀಡಿದ ಮುಖ್ಯ ಗುರುಗಳು ಹಾಗೂ ಶಿಕ್ಷಕರೆಲ್ಲರೂ ನಮ್ಮ ನೆನಪಿನ ಪುಟದಲ್ಲಿ ಚಿರಸ್ಮರಣೀಯರಾಗಿರುತ್ತಾರೆ.
ಕುಮಾರಿ ಭೂಮಿಕಾ ಕಮಲಾಕರ್, ಏಳನೇ ತರಗತಿ ವಿದ್ಯಾರ್ಥಿನಿ
ಶಿಶು ವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರ