Nov 29 : ಸದೃಢ ದೇಹದಲ್ಲಿ ಸದೃಢ ಮನಸ್ಸು ವಾಸ ಮಾಡುತ್ತದೆ. ಸದೃಢ ಮನಸ್ಸಿನಿಂದ ಸದೃಢ ದೇಶದ ರಚನೆ ಸಾಧ್ಯ ಎಂಬ ಮಾತು ಸತ್ಯ. ಅನಾದಿ ಕಾಲದಿಂದಲೂ ಕ್ರೀಡೆಗಳು ಒಂದು ರೀತಿಯ ಮನರಂಜನಾ ಚಟುವಟಿಕೆಗಳಾಗಿವೆ. ಆರೋಗ್ಯಕ್ಕೆ ಅನುಕೂಲವಾಗುವಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕ್ರೀಡೆ ಉತ್ತಮ ಮಾರ್ಗವಾಗಿದೆ. ನಮ್ಮ ದೇಹಕ್ಕೇ ಶಕ್ತಿ ನೀಡುವುದರ ಜೊತೆಗೆ ನಮ್ಮನ್ನು ಕ್ರಿಯಾಶೀಲರನ್ನಾಗಿಸುವ ಕ್ರೀಡೆ ಜೀವನಕ್ಕೆ ಅತಿ ಅವಶ್ಯಕ. ಕ್ರೀಡೆಗಳಲ್ಲಿರುವ ವಿಭಿನ್ನ ನಿಯಮ ಹಾಗೂ ನಿಬಂಧನೆಗಳಿಂದ ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಅವೇಲಿನ್‍ರವರ ನೇತೃತ್ವದಲ್ಲಿ ಕ್ರೀಡಾ ದಿನವನ್ನು ಆಚರಿಸಲಾಯಿತು. ಶಿಸ್ತು ಬದ್ಧ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕರಾದ ಭಗಿನಿ ಸಿಂಥಿಯಾರವರು ಚಾಲನೆ ನೀಡಿದರು. ಪಥ ಸಂಚಲನ, ಕ್ರೀಡಾ ಜ್ಯೋತಿಯ ಆಗಮನ, ಕ್ರೀಡಾ ಪ್ರತಿಜ್ಞೆಗಳ ಮೂಲಕ ಪ್ರಾರಂಭವಾದ ಕ್ರೀಡೆಯು ವಿದ್ಯಾರ್ಥಿಗಳ ಶಿಸ್ತು ಬದ್ಧ ಜೀವನಕ್ಕೆ ಮಾದರಿಯಾಯಿತು.
ಶ್ರೀಮತಿ ರಾಜೇಶ್ರೀ. ಕೆ, ಸಹಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರ