June 12: ಶಾಲಾ ಪ್ರಾರಂಭೋತ್ಸವದ ಆರಂಭದ ದಿನಗಳಲ್ಲಿ ಬರುವ ಅತಿ ಮುಖ್ಯವಾದ ದಿನಾಚರಣೆ ಅದುವೆ ಪರಿಸರ ದಿನಾಚರಣೆ. ಜೂನ್ 5 ರಂದು ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಪ್ರಾಥಮಿಕ ಶಾಲೆಗಳು ಜಂಟಿಯಾಗಿ, ಶಾಲಾ ಆವರಣದಲ್ಲಿ ಅರ್ಥಪೂರ್ಣವಾಗಿ ಈ ದಿನದ ಸಂಭ್ರಮವನ್ನು ಆಚರಿಸಿದೆವು ಈ ಕಾರ್ಯಕ್ರಮಕ್ಕೆ ಸಿ.ಕವಿತಾ, ಸಿ.ಸಿಂಪ್ರೋಸ್ ಮತ್ತು ಶ್ರೀ ಶಿವಕಾಂತ ಹಾಲಗೇರಿರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಎಲ್ಲಾ ಮುಖ್ಯ ಅತಿಥಿಗಳು ಸಸಿಗಳಗೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳು ಅತಿ ಉತ್ಸಾಹದಿಂದ ಪರಿಸರ ದಿನದ ಸಂದೇಶವುಳ್ಳಂತಹ ನಾಟಕವನ್ನು ಪ್ರದರ್ಶಿಸಿದರು. ಪರಿಸರದ ಬಗೆಗಿನ “ಮನೆಗೊಂದು ಮಗು, ಮಗುವಿಗೊಂದು ಮರ”
“ಕಾಡು ಉಳಿಸಿ, ಭವಿಷ್ಯ ಬೆಳೆಸಿ”, “ಮನೆಗೊಂದು ಮರ, ಊರಿಗೊಂದು ವನ”, “ಮರ ಬೆಳೆಸಿ, ನಾಡು ಉಳಿಸಿ” ಎಂಬಿತ್ಯಾದಿ ಅತ್ಯದ್ಭುತವಾದ ಮಕ್ಕಳ ಹೇಳಿಕೆಗಳ ನಾದ ಶಾಲಾ ಆವರಣವನ್ನು ತುಂಬಿಕೊಂಡಿತ್ತು.
ಶಿಶುವಿಹಾರ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಂಪ್ರೋಸ್‍ರವರು ಪರಿಸರ ದಿನದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮವು ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.
ಶ್ರೀಯುತ ವಿಶ್ವನಾಥ ಕುಂಬಾರ, ದೈಹಿಕ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ