July 17:ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಆದ್ದರಿಂದ ಅವರಲ್ಲಿ ಜವಾಬ್ದಾರಿ ಹೊರುವ ಗುಣಗಳನ್ನು ಬೆಳೆಸಲು ಪ್ರತಿವರ್ಷದಂತೆ ಈ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿಯೂ ನಮ್ಮ ಬೆಥನಿ ಪ್ರೌಢ ಶಾಲೆಯಲ್ಲಿ ಮಂತ್ರಿಮಂಡಲದ ರಚನೆಯನ್ನು ಮಾಡಲಾಯಿತು. ನೂತನ ಮಂತ್ರಿಮಂಡಲದ ಸದಸ್ಯರನ್ನು ಆಯ್ಕೆ ಮಾಡಿ ಅವರ ಪ್ರಮಾಣ ವಚನ ಕಾರ್ಯಕ್ರಮವನ್ನು ದಿ.30.06.2023ರ ಶುಕ್ರವಾರದಂದು ಮಧ್ಯಾಹ್ನ 3.00 ಗಂಟೆಗೆ ಸರಿಯಾಗಿ ನೆರವೇರಿಸಲಾಯಿತು.

ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮಕ್ಕೆ ಶ್ರೀಯುತ ಶರಣಪ್ಪ ಅಬ್ಬಿಗೇರೆ ಶಿಕ್ಷಣ ಸಂಯೋಜಕರು ಹಾಗೂ ಪಠ್ಯ ಪುಸ್ತಕ ನಿರ್ವಹಣಾಧಿಕಾರಿಗಳು, ಶಾಲಾ ಸಂಚಾಲಕಿ ಸಿಸ್ಟರ್ ಸಿಂಪ್ರೋಜ್ ಅವರ ಜೊತೆ ನಮ್ಮ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕವಿತಾರವರು ಅತಿಥಿ ಗಣ್ಯರಾಗಿ ಆಗಮಿಸಿ ವೇದಿಕೆಗೆ ಶೋಭೆಯನ್ನಿತ್ತರು. ಸ್ವಾಗತ ನೃತ್ಯ, ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಮುಂದುವರೆದು, ನಾಯಕನ ಗುಣಲಕ್ಷಣಗಳನ್ನು ತಿಳಿಸುವ ಒಂದು ಚಿಕ್ಕದಾದ ಚೊಕ್ಕದಾದ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು.

ಕಾರ್ಯಕ್ರಮದ ಕೇಂದ್ರ ವಿಷಯವಾಗಿರುವ ಪ್ರಮಾಣವಚನವನ್ನು ಶಾಲಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ 10ನೇ ತರಗತಿಯ ವಿದ್ಯಾರ್ಥಿನಿ ಪ್ರೀಯಾ ತಂದೆ ಬಸವರಾಜ ಅವಳ ಮುಖೇನ ನೆರವೇರಿಸಲಾಯಿತು.

ಮುಂದುವರೆದು ಮುಖ್ಯ ಅತಿಥಿಯಾದ ಶ್ರೀ ಶರಣಪ್ಪ ಅಬ್ಬಿಗೇರೆ ಸರ್ ಅವರು ಬೆಥನಿ ಪ್ರೌಢ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡ ಕೌಶಲ್ಯಗಳನ್ನು ಬೆಳೆಸಿ ಸಮಾಜದಲ್ಲಿ ತಮ್ಮದೇ ಆದ ಗುರುತರ ಜವಾಬ್ದಾರಿಯನ್ನು ನಿಭಾಯಿಸುತ್ತ ಬಂದಿದೆ ಎಂದು ಶ್ಲಾಘಿಸಿದರು. ಜೊತೆಗೆ “ಯಾರು ಮಾಡುವರೋ, ಪರಿಪೂರ್ಣ ಕಾಯಕ ಅವರೇ ಆಗುವರು ಸಮರ್ಥ ನಾಯಕ” ಎಂಬ ಹೇಳಿಕೆಯನ್ನು ನಾಯಕರ ಗುಣಲಕ್ಷಣದೊಂದಿಗೆ ತಮ್ಮ ಅನಿಸಿಕೆಗಳನ್ನು ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಕವಿತಾರವರು ವ್ಯಕ್ತಪಡಿಸಿದರು. ಅಲ್ಲದೆ ಶಾಲಾ ಸಂಚಾಲಕಿ ಸಿಸ್ಟರ್ ಸಿಂಪ್ರೋಜ್‍ರವರು ಕೂಡ ಒಬ್ಬ ಸಮರ್ಥ ನಾಯಕನಲ್ಲಿ ಇರಬೇಕಾದ ಪ್ರಮುಖ ಮೂರು ಗುಣಲಕ್ಷಣಗಳನ್ನು ವಿವರಿಸಿ ಹೇಳಿದರು. ಶ್ರೀಯುತ ಶೇಷಪ್ಪರವರು ವಂದನಾರ್ಪಣೆ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

 

 

 

 

 

 

 

 

 

ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]