Nov 18: ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಿ ಜವಹರಲಾಲ ನೆಹರೂ ಅವರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಬೇಕೆಂದು ಹೇಳಿದ್ದಾರೆ. ಅದರ ಪ್ರಕಾರ ದೇಶದಾದ್ಯಂತ ನವೆಂಬರ 14ರಂದು ಮಕ್ಕಳ ದಿನಾಚರಣೆಯನ್ನು ಪ್ರತಿಯೊಂದು ಶಾಲೆಯಲ್ಲಿ ಆಚರಿಸಲಾಗುತ್ತದೆ. ಅದರಂತೆ ನಮ್ಮ ಬೆಥನಿ ಪ್ರೌಢ ಶಾಲೆಯಲ್ಲಿ ದಿ.16/11/2023ರ ಮಂಗಳವಾರದಂದು ಅತೀ ಉಲ್ಲಾಸಪೂರ್ವಕವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವು ಶಿಕ್ಷಕರ ಪ್ರಾರ್ಥನೆಯಿಂದ ಪ್ರಾರಂಭವಾಗಿ ಕುತೂಹಲಕರವಾಗಿ ಸ್ವಾಗತ ನಾಟಕದೊಂದಿಗೆ ಮುಂದುವರೆಯಿತು. ಶಿಕ್ಷಕರೆಲ್ಲರೂ ಮಕ್ಕಳಲ್ಲಿ ಮಕ್ಕಳಾಗಿ “ಮಕ್ಕಳು ಉದ್ಯಾನದ ಮೊಗ್ಗುಗಳಂತೆ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು, ಏಕೆಂದರೆ ಅವರು ರಾಷ್ಟ್ರದ ನಾಳಿನ ಪ್ರಜೆಗಳು. ಸರಿಯಾದ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಉತ್ತಮ ವ್ಯವಸ್ಥೆ ನಿರ್ಮಾಣ ಸಾಧ್ಯ” ಎಂಬ ನೆಹರೂ ಅವರ ಹೇಳಿಕೆಯಂತೆ ಮೌಲ್ಯಾಧಾರಿತ ನಾಟಕವನ್ನು ಮುಖ್ಯೋಪಾಧ್ಯಾಯಿನಿ ಅವರ ನೇತೃತ್ವದಲ್ಲಿ ಪ್ರದರ್ಶಿಸಲಾಯಿತು. ಜೊತೆಗೆ ಶಿಕ್ಷಕರ ಕೆಲವೊಂದು ಸಂಸ್ಕøತಿ ಬೀರುವ ನೃತ್ಯಗಳನ್ನು ಮಾಡಿದರು.
ಅಲ್ಲದೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿರುವ ಪಾಲಕ-ಶಿಕ್ಷಕ ಸಂಘದ ಅಧ್ಯಕ್ಷ-ಉಪಾಧ್ಯಕ್ಷರಿಂದ ಆಟೋಟ ಸ್ಪರ್ಧೆಗಳಲ್ಲಿ ಗೆದ್ದಂತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಒಟ್ಟಿನಲ್ಲಿ ಮಕ್ಕಳನ್ನು ಸುಧಾರಿಸುವ ಏಕೈಕ ಮಾರ್ಗ ಎಂದರೆ ಅವರನ್ನು ಪ್ರೀತಿಯಿಂದ ಗೆಲ್ಲುವುದು. ಮಕ್ಕಳೊಂದಿಗೆ ಸ್ನೇಹದಿಂದ ಇರದ ಹೊರತು ನೀವು ಅವರ ದಾರಿಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬ ಉದ್ದೇಶವನ್ನಿಟ್ಟುಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೆರಿಸಲಾಯಿತು.
ಶ್ರೀಮತಿ ಅರ್ಚನಾ, ಸಹಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ