June 10: ಅರಣ್ಯ ಇಲಾಖೆ ವತಿಯಿಂದ ತಾಲೂಕ ಕಾನೂನು ಸೇವಾ ಸಮಿತಿ ಚಿತ್ತಾಪೂರ, ವಕೀಲರ ಸಂಘ ಚಿತ್ತಾಪೂರ , ಪ್ರಾದೇಶಿಕ ಅರಣ್ಯ ವಲಯ ಚಿತ್ತಾಪೂರ ಹಾಗೂ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪೂರ ಇವರ ಸಂಯುಕ್ತಾಶ್ರಯದಲ್ಲಿ “ಭೂಮಿ ಮರುಸ್ಥಾಪನೆ, ಮರುಭೂಮಿಕರಣ ಹಾಗೂ ಬರ ಸ್ಥಿತಿಸ್ಥಾಪಕತ್ವ” ಎಂಬ ಧ್ಯೇಯವನ್ನಿಟ್ಟುಕೊಂಡು ದಿನಾಂಕ 05/06/2024ರ ಬುಧವಾರದಂದು ನಮ್ಮ ಬೆಥನಿ ಪ್ರೌಢ ಶಾಲೆಯಲ್ಲಿ ಬಹು ವಿಜೃಂಭಣೆಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ತಾಪೂರಿನ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಶ್ರೀಯುತ ಸಂತೋಷಕುಮಾರ ದೈವಜ್ಞ ಅವರು ಉದ್ಘಾಟಕರಾಗಿ ಶಿಶುವಿಹಾರ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಂಪ್ರೋಜ್ ಅವರ ಅಧ್ಯಕ್ಷತೆಯಲ್ಲಿ ಸಿಸ್ಟರ್ ಕವಿತಾ ಅವರು ಮುಖ್ಯ ಅತಿಥಿಗಳಾಗಿದ್ದರು. ಅಲ್ಲದೆ ಕಾನೂನು ತಜ್ಞರಾದ ಕೆಲವು ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು. ದೀಪ ಬೆಳಗಿಸುವುದರ ಮೂಲಕ ಮತ್ತು ಸಸಿ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವು ಮೊದಲು ಪ್ರಾರ್ಥನಾ ಹಾಡಿನೊಂದಿಗೆ ಪ್ರಾರಂಭವಾಗಿ, ಪರಿಸರ ಗೀತೆ ಮತ್ತು ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ರೂಪಕದೊಂದಿಗೆ ಮುಂದುವರೆದು ನ್ಯಾಯಾಧೀಶರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು, ಪರಿಸರದ ಮಹತ್ವವನ್ನು ತಿಳಿಸುತ್ತ ಕ್ರಿಶ್ಚಿಯನ್ ಮಿಶನರಿಯ ಎಲ್ಲ ಸಂಸ್ಥೆಗಳಲ್ಲಿ ಪರಿಸರದÀ ಮಹತ್ವಕ್ಕೆ ಬಹಳ ಒತ್ತು ನೀಡಲಾಗುತ್ತದೆ ಎಂದು ಹೆಮ್ಮೆಯಿಂದ ಶ್ಲಾಘಿಸಿದರು. ನಂತರ ಶ್ರೀಮತಿ ಅಂಜನಾದೇವಿ, ನ್ಯಾಯವಾದಿ ಶ್ರೀಯುತ ಎ. ಎಂ. ಅವಂಟಿ ಅರಣ್ಯ ವಲಯ ಅಧಿಕಾರಿಯಾದ ಶ್ರೀಯುತ ವಿಜಯಕುಮಾರ ಇವರೆಲ್ಲರೂ ಪರಿಸರದ ಕುರಿತು ಮಕ್ಕಳಲ್ಲಿ ಎಚ್ಚರಿಕಾ ಭಾವವನ್ನು ಮೂಡಿಸುವಂತಹ ಮಾತುಗಳನ್ನಾಡಿದರು.
ಮುಖ್ಯೋಪಾಧ್ಯಾಯಿನಿಯರಾದ ಸಿಸ್ಟರ್ ಕವಿತಾ ಮತ್ತು ಸಿಸ್ಟರ್ ಸಿಂಪ್ರೋಜ್ ರವರ ನೇತೃತ್ವದಲ್ಲಿ ಎಲ್ಲ ಅತಿಥಿಗಣ್ಯರು ಹಾಗೂ ಶಾಲಾ ಶಿಕ್ಷಕ ವೃಂದದವರು ಮಕ್ಕಳೆಲ್ಲರೂ ಸೇರಿ ಸುಮಾರು 25 ಸಸಿಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು. ಜೊತೆಗೆ 350 ಸಸಿಗಳನ್ನು ಮನೆಯ ಮುಂದೆ, ಹಿತ್ತಲಲ್ಲಿ, ಹೊಲಗಳಲ್ಲಿ ನೆಡಲು ಪ್ರೋತ್ಸಾಹಿಸಿ ಮಕ್ಕಳಿಗೆ ಹಂಚಲಾಯಿತು. ಅಲ್ಲದೆ ಮಕ್ಕಳು ಆ ಸಸಿಗಳನ್ನು ನೆಟ್ಟು ಅವರ ಕುಟುಂಬದೊಂದಿಗೆ ಇರುವ ಭಾವಚಿತ್ರವನ್ನು ಒಂದು ಪುಟಕ್ಕೆ ಹಚ್ಚಿ ಪರಿಸರದ ಬಗ್ಗೆ ಒಂದು ಸಣ್ಣ ಪ್ರಬಂಧವನ್ನು ಬರೆಯುವ ಚಟುವಟಿಕೆಯನ್ನು ಕೊಟ್ಟರು. ಆ ಚಟುವಟಿಕೆಯನ್ನು ಸೋಮವಾರ ಶಾಲೆಗೆ ತಂದು ಒಪ್ಪಿಸಬೇಕೆಂದು ಹೇಳುತ್ತಾ ಮಕ್ಕಳಲ್ಲಿ ಕುತೂಹಲ ಹುಟ್ಟಿಸಿದÀರು. ಹೀಗೆ ಬಹು ಅರ್ಥಪೂರ್ಣವಾಗಿ, ಯಶಸ್ವಿಯಾಗಿ ಕಾಂiÀರ್iಕ್ರಮವು ಮುಕ್ತಾಯವಾಯಿತು.
ಶ್ರೀಯುತ ವಿಶ್ವನಾಥ, ದೈಹಿಕ ಶಿಕ್ಷಕ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ