June 19: ಮೇ 29 ರಂದು ಶಾಲಾ ಪ್ರಾರಂಭೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಥನಿ ಶಿಕ್ಷಣ ಸಂಸ್ಥೆ ನೀಡಿದ ಸೂಚನೆಯಂತೆ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರದಲ್ಲಿ ಅತ್ಯಂತ ಸಂಭ್ರಮದಿಂದ ಶಾಲಾ ಪುನರಾರಂಭವನ್ನು ಏರ್ಪಡಿಸಲಾಯಿತು. ವಿನೂತನ ಪರಿಕಲ್ಪನೆಯಂತೆ ಈ ವರ್ಷವೂ ಕೂಡ ಶಾಲೆಯಲ್ಲಿ ತೋರಣ ಕಟ್ಟಿ ರಂಗೋಲಿ ಬಿಡಿಸಿ ಮಕ್ಕಳನ್ನು ಸ್ವಾಗತಿಸಲಾಯಿತು. ಪ್ರಥಮ ದಿನಾಚರಣೆಗೆ ಆಗಮಿಸಿದ ಮಕ್ಕಳನ್ನು ಶಿಕ್ಷಕರು ಆರತಿ ಬೆಳಗಿ ಪುಷ್ಪಗಳ ಸುರಿಸುತ್ತಾ ಸ್ವಾಗತಿಸಿದ್ದು ವಿಶಿಷ್ಟವಾಗಿತ್ತು. 2024 ಮತ್ತು 25 ನೇ ಸಾಲಿನ ಶೈಕ್ಷಣಿಕ ಸಾಲಿನ ಮಕ್ಕಳ, ಶಿಕ್ಷಕರ, ಸಂಸ್ಥೆಯ ಹಾಗೂ ಪಾಲಕರ ಏಳಿಗೆಗಾಗಿ ಅರ್ಥಪೂರ್ಣವಾದ ಪ್ರಾರ್ಥನೆ ಸಲ್ಲಿಸಲಾಯಿತು. ಆಟ ಪಾಠ ದೊಂದಿಗೆ ನಲಿಯುತ್ತಾ ಸಂತಸದ ಕಲಿಕೆಯನ್ನು ಮುಂದುವರಿಸೋಣ ಎಂಬ ಮುಖ್ಯ ಗುರುಗಳಾದ ಭಗಿನಿ ಸಿಂಪೆÇ್ರಸ್‍ರವರ ನುಡಿಗಳು ಪ್ರಥಮ ದಿನ ಶಾಲೆಗೆ ಬಂದ ಮಕ್ಕಳ ಮನಸ್ಸಲ್ಲಿ ಸಂಭ್ರಮದ ಸಂತೋಷಕ್ಕೆ ಮನೆ ಮಾಡಿತು.
ಶ್ರೀಮತಿ ರಾಜೇಶ್ರೀ ಕೆ ಅಲ್ಲೂರ, ಸಹಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರ