June 19: ಹಸಿರು ತಳಿರು ತೋರಣಗಳಿಂದ ಶೃಂಗರಿಸಿದ ಧಾರವಾಡದ ಪ್ರಜೆಂಟೇಶನ್ ಶಾಲಾ ಆವರಣದಲ್ಲಿ ಶುಭ್ರ ಸಮವಸ್ತ್ರದಲ್ಲಿ, ಜ್ಞಾನಾರ್ಜನೆಗೆಂದು ಶಾಲೆಗೆ ಆಗಮಿಸಿದ ನಗುಮೊಗದ ಮಕ್ಕಳನ್ನು, ಬೆಥನಿ ಶಿಕ್ಷಣ ಸಂಸ್ಥೆಯ, ಪಶ್ಚಿಮ ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ಹಾಗೂ ಕಾಪೆರ್Çರೇಟ್ ಮ್ಯಾನೇಜರ್ ಸಿಸ್ಟರ್ ಸ್ಯಾಲಿ ಬಿ. ಎಸ್ ರವರು ಗುಲಾಬಿ ಹೂವು ನೀಡುವುದರ ಮೂಲಕ ಶಾಲೆಗೆ ಸ್ವಾಗತಿಸಿದರು.
ಶಾಲಾ ಶಿಕ್ಷಕಿಯರು ಮಕ್ಕಳ ಹಣೆಗೆ ಕುಂಕುಮವಿಟ್ಟು, ಆರತಿ ಮಾಡಿ, ಶಾಲಾ ವಾದ್ಯ ವೃಂದದೊಂದಿಗೆ ಶಾಲಾ ಸಭಾಂಗಣಕ್ಕೆ ಅದ್ಧೂರಿಯಾಗಿ ಕರೆದುಕೊಂಡು ಹೋಗಲಾಯಿತು. ಅಲ್ಲಿ ಸಮಾರಂಭವು ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಮಕ್ಕಳ ಜೀವನದಲ್ಲಿ ಶಿಕ್ಷಣದ ಮಹತ್ವದ ಕುರಿತು ಸಹ ಶಿಕ್ಷಕರಾದ ಶ್ರೀ. ಸಂಜೀವ ಲಿಂ. ಅಂಬಿಗೇರ ಹಾಗೂ ಶಾಲೆಯ ಇತಿಹಾಸ, ಹಿರಿಮೆ-ಗರಿಮೆಯ ಕುರಿತು ಶಿಕ್ಷಕಿ ಸುಮಲತಾರಾಣಿಯವರು ಮಾತನಾಡಿದರು.
ಮಕ್ಕಳೆಲ್ಲರೂ ಜ್ಞಾನದಾಹಿಗಳಾಗಬೇಕು, ಸಮಯದ ಮಹತ್ವವನ್ನು, ಆರೋಗ್ಯದ ಪ್ರಾಮುಖ್ಯತೆಯನ್ನು ಅರಿಯಬೇಕು ಎಂದು ಸಿಸ್ಟರ್ ಸ್ಯಾಲಿ ಬಿ. ಎಸ್ ರವರು ಕಿವಿಮಾತು ಹೇಳಿದರು. ಮಕ್ಕಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀ ಎನ್. ಎನ್. ಭಟ್ ರವರು ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಿಸ್ಟರ ಅವೆಲಿನ್ ಸ್ವಾಗತಿಸಿ, ಸರ್ ಸುವೀನ ನಿರೂಪಿಸಿದರು.
ನಂತರ ಮಕ್ಕಳಿಗೆ ಸಿಹಿ ಮತ್ತು ಪಠ್ಯಪುಸ್ತಕ ವಿತರಿಸಲಾಯಿತು.
ಶ್ರೀ ಸುವೀನ ಎಸ್. ತೋಟಗಿ, ಸಹ ಶಿಕ್ಷಕರು
ಪ್ರಜೆಂಟೇಶನ್ ಬಾಲಕಿಯರ ಪ್ರೌಢಶಾಲೆ, ಧಾರವಾಡ