July 23: ದಿನಾಂಕ 15.07.2024ರಂದು ನಮ್ಮ ಸಂಸ್ಥೆಯಲ್ಲಿ ಸಂಸ್ಥಾಪನಾ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ನಮ್ಮ ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಾಲಕಿ ವಂ.ಭ. ರೋಸ್ ಲೀಟರವರು ಅಧ್ಯಕ್ಷತೆಯನ್ನು ವಹಿಸಿ ಸಂಸ್ಥಾಪಕರ ಮೌಲ್ಯಗಳು, ಉದ್ದೇಶ, ದೂರದೃಷ್ಟಿತ್ವ ನಮ್ಮಲ್ಲಿ ಬೆಳೆಸಿ ಉತ್ತಮ ಶಿಕ್ಷಕಿಯರಾಗಲು ಹುರಿದುಂಬಿಸಿದರು. ಈ ಕಾರ್ಯಕ್ರಮವನ್ನು ಪ್ರಾರ್ಥನಾ ವಿಧಿಯ ಮೂಲಕ ಪ್ರಾರಂಭಿಸಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾಚರಣೆಗೈಯುವ ಮೂಲಕ ಅವರನ್ನು ನಮಿಸಲಾಯಿತು. ತದನಂತರ ವಿದ್ಯಾರ್ಥಿ ಶಿಕ್ಷಕರು ಶುಭಾಶಯ ಗೀತೆಯನ್ನು ಹಾಡಿದರು. ಬೆಥನಿ ವಿದ್ಯಾ ಸಂಸ್ಥೆಯ ಒಂದು ಧ್ಯೇಯ ಪರಿಸರ ಸಂರಕ್ಷಣೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ನೃತ್ಯವನ್ನು ಪ್ರರ್ದಶಿಸಲಾಯಿತು. ವಂ. ಗುರು. ಆರ್. ಎಫ್. ಸಿ ಮಸ್ಕರೇನಸ್ ರವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆದ್ಯತೆ ನೀಡಿದರು ಹಾಗೂ ಅವರ ಏಳಿಗೆಗೆ ಶ್ರಮಿಸಿದರು ಎಂಬುದನ್ನು ಎಂದು ಗೀತ ರೂಪಕದ ಮೂಲಕ ಶಿಕ್ಷಕಿ ವಿದ್ಯಾರ್ಥಿಗಳು ನಡೆಸಿಕೊಟ್ಟರು. ರಾಷ್ಟಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

 

ಶ್ರೀಮತಿ ಲವೀನಾ ಲೋಬೊ, ಪ್ರಾಚಾರ್ಯರರು
ರೋಸಾ ಮಿಸ್ತಿಕಾ ಟಿ.ಟಿ.ಐ, ಕಿನ್ನಿಕಂಬಳ

 

 

 

 

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]