ರೋಸಾಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆ ಕಿನ್ನಿಕಂಬಳ ಇಲ್ಲಿ ದಿನಾಂಕ 27.06.2024 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ದಿನಾಚರಣೆಯನ್ನು ಸಂಸ್ಥೆಯ ಸಭಾಗಂಣದಲ್ಲಿ ನಡೆಸಲಾಯಿತು. ದ್ವಿತೀಯ ಡಿ.ಇಲ್. ಇಡಿ ವಿದ್ಯಾರ್ಥಿ ಶಿಕ್ಷಕಿಯರಿಂದ ಪ್ರಾರ್ಥನಾ ಗೀತೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ನಂತರ ಪರಿಸರ ಗೀತೆಯ ಮೂಲಕ ಪರಿಸರದ ವರ್ಣನೆಯನ್ನು ವರ್ಣಿಸಿದರು. ಬಳಿಕ ಪರಿಸರ ಜಾಗೃತಿ ಮೂಡಿಸುವ ಕಿರುನಾಟಕವನ್ನು ಪ್ರದರ್ಶಿಸಿದರು, ಸಂಸ್ಥೆಯ ಪ್ರಾಂಶುಪಾಲರು ಶೀಮತಿ ಲವೀನ ಲೋಬೊರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಭಾವಿ ಶಿಕ್ಷಕಿಯರಾದ ನೀವು ಪರಿಸರ ಸ್ವಚ್ಛತೆ, ಪರಿಸರ ಕಾಳಜಿ ಮತ್ತು ಪರಿಸರ ಸಂರಕ್ಷಣೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಮೂಡಿಸಲು ಕರೆನೀಡಿದರು. ಸಂಸ್ಥೆಯ ಉಪನ್ಯಾಸಕರು, ಕಛೇರಿಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು, ದ್ವಿತೀಯ ಡಿ.ಇಲ್. ಇಡಿ ವಿದ್ಯಾರ್ಥಿ ಶಿಕ್ಷಕಿ ಕುಮಾರಿ ನಿಕಿತರವರು ಸ್ವಾಗತಿಸಿದರು, ದ್ವಿತೀಯ ಡಿ.ಇಲ್. ಇಡಿ ಪ್ರಶಿಕ್ಷಣಾರ್ಥಿ ಶ್ರೀಮತಿ ವರ್ಷರವರು ವಂದಿಸಿದರು. ವಿದ್ಯಾರ್ಥಿ ಶಿಕ್ಷಕಿ ಪ್ರಕೃತಿಯವರು ಕಾರ್ಯಕ್ರವನ್ನು ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಪ್ರಾಂಶುಪಾಲರ ನೇತ್ರತ್ವದಲ್ಲಿ ಶಾಲಾ ತೋಟದಲ್ಲಿ ಗಿಡ ನೆಡೆವ ಕಾರ್ಯಕ್ರಮವು ಉಪನ್ಯಾಸಕ ವೃಂದ ಮತ್ತು ಪ್ರಶಿಕ್ಷಣಾರ್ಥಿಗಳು ನಡೆಸಿಕೊಟ್ಟರು.
ಶೀಮತಿ ಲವೀನ ಲೋಬೊ, ಪ್ರಾಂಶುಪಾಲರು
ರೋಸಾಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆ ಕಿನ್ನಿಕಂಬಳ