August 09: ನಮ್ಮ ಪರಿಸರವು ಸಂಪನ್ಮೂಲಗಳ ಆಗಾಧ ಪ್ರಮಾಣ ಭಂಢಾರವನ್ನೇ ಹೊಂದಿದೆ. ವಸುಂಧರೆಯ ಈ ಉಗ್ರಾಣದಲ್ಲಿ ಹಲವು ಔಷಧೀಯ ಗಿಡಗಳು, ಮರಗಳು, ಹಣ್ಣಿನ ಗಿಡಗಳು, ಯಥ್ಥೇಚ್ಚವಾಗಿದ್ದು ಇವೆಲ್ಲವೂ ನಮಗೆ ಶುದ್ದವಾದ ಗಾಳಿಯ ಜೊತೆಗೆ ಪರಿಶುದ್ದ ಆಹಾರ ನೀಡುತ್ತಿರುವುದು ನಮ್ಮ ಪುಣ್ಯ ಇಂತಹ ಇಳೆಯಲ್ಲಿ ನಾವು ಬದುಕಿ ಬಾಳನ್ನು ಸಾಗಿಸುತ್ತಿರುವುದು ಮಹಾ ಪುಣ್ಯ. ನಾವು ಪುಣ್ಯವಂತರು, ಆದರೆ ದೇವರು ನೀಡಿದ ಇಂತಹ ಪ್ರಕೃತಿದತ್ತ ಇಳೆಯನ್ನು ನಾವು ಸ್ವಾರ್ಥಕೋಸ್ಕರ ಹಾಳುಗೆಡಹುತ್ತಿದ್ದೇವೆ. ಕೈಗಾರಿಕೆ ಉದ್ದೇಶದಿಂದ ಹಲವು ಮರಗಿಡ, ವಿನಾಶದ ಅಂಚಿನಲ್ಲಿರುವ ಸಸ್ಯಗಳನ್ನು ಕಡಿದು ಕೈಗಾರಿಕೆ ಸ್ಥಾಪನೆ ಮಾಡುತ್ತಿದ್ದೇವೆ. ಹಾಗಾಗಾಕೂಡದು. ನಾವೆಲ್ಲರೂ ನಮ್ಮ ಮನೆಯ ಸುತ್ತ ಉತ್ತಮ ಹಣ್ಣಿನ ಗಿಡ ನೆಟ್ಟು ಪೋಷಿಸಿ ಸಾಕಿ ಸಲಹಿ ಬೆಳೆಸೋಣ. ಪ್ರತಿಯೊಂದು ಮಗು ತನ್ನ ಹುಟ್ಟು ಹಬ್ಬಕ್ಕೆ ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಅದು ನಾವು ಪ್ರಕೃತಿಗೆ ನೀಡಿದ ಬಹು ದೊಡ್ಡ ಉಡುಗೊರೆ ಎಂದು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿಯ ಸಮಾಜ ಶಿಕ್ಷಕಿ ಹಾಗೂ ದ.ಕ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘ ಮಂಗಳೂರು ಉತ್ತರವಲಯದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಚಿತ್ರಾಶ್ರೀಯವರು ಬಜಪೆ ಹೋಲಿ ಫ್ಯಾಮಿಲಿ ಫ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಧ್ಯಾರ್ಥಿಗಳಿಗೆ ಸುಮಾರು 10 ವಿವಿಧ ಜಾತಿಯ ಹಣ್ಣಿನ ಗಿಡ ವಿತರಿಸಿ ಅತಿಥಿ ಸ್ಥಾನದಿಂದ ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ವ ಭ ಜೆಸಿಂತಾ ವೇಗಸ್‍ರವರು ವಹಿಸಿ ಅಧ್ಯಕ್ಷೀಯ ಪೀಠದಿಂದ ಅಧ್ಯಕ್ಷೀಯ ನುಡಿಯನ್ನು ನುಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಉತ್ತಮ ಜಾತಿಯ ಕಸಿ ಮಾಡಿದ ನೇಂದ್ರ ಬಾಳೆಗಿಡ, ಲಕ್ಷ್ಮಣ ಫಲ, ರಾಮ ಫಲ, ಲಿಂಬೆ, ನೀಲಂ ಮಾವಿನ ಗಿಡ, ಅಂಟುರಹಿತ ಹಲಸು, ಚಂದ್ರ ಪೇರಳೆ, ಶ್ವೇತ ಪೇರಳೆ, ಸ್ಟಾರ್ ಹಣ್ಣಿನ ಗಿಡ ವಿತರಿಸಿ ಶಾಲೆಯ ಸುತ್ತ ನೆಟ್ಟು ಸಾಕಿ ಬೆಳೆಸಲಾಯಿತು ಹಾಗೂ ಎಲ್ಲಾ ಮಕ್ಕಳು ಈ ಸಂದರ್ಭ ಪರಿಸರ ರಕ್ಷಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮಕ್ಕಳಿಂದ ಪರಿಸರದ ಕುರಿತು ಹಣ್ಣಿನ ಗಿಡಗಳ ಮಹತ್ವದ ಕುರಿತು ರೂಪಕ, ಪರಿಸರ ಗೀತೆ ಹಾಗೂ ಪರಿಸರ ಜಾಗೃತಿಯ ಭಾಷಣದೊಂದಿಗೆ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು. ವೇದಿಕೆಯಲ್ಲಿ ಪರಿಸರ ಸಂಘದ ಕಾರ್ಯದರ್ಶಿ ಕುಮಾರಿ ಪ್ರಿಯಾಂಕ ಉಪಸ್ಥಿತರಿದ್ದರು. ಕುಮಾರಿ ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಅರ್ಚನಾ ಸ್ವಾಗತಿಸಿದರು. ಕುಮಾರಿ ಶ್ವೇತಾ ವಂದಿಸಿದರು. ಪರಿಸರ ಸಂಘದ ಅಧ್ಯಕ್ಷರಾದ ಶಿಕ್ಷಕ ವಾಸುದೇವ ರಾವ್ ಕುಡುಪು ಶಿಕ್ಷಕ ಶ್ರೀ ಪ್ರಶಾಂತ್, ಶಿಕ್ಷಕಿಯಾದ ಶ್ರೀಮತಿ ಲಿಲ್ಲಿ ಮಿನೇಜಸ್, ಶ್ರೀಮತಿ ಯಶೋಧ, ಶ್ರೀಮತಿ ಗೀತಾಂಭ, ಶ್ರೀಮತಿ ಶ್ರೀಧನ್ಯಾ, ಕುಮಾರಿ ಶ್ರೀಜಾ ಕಾರ್ಯಕ್ರಮಕ್ಕೆ ಸಹಕರಿಸಿದರು.
ಶ್ರೀ ವಾಸುದೇವ ರಾವ್
ಹೋಲಿ ಫ್ಯಾಮಿಲಿ ಪ್ರೌಢಶಾಲೆ (ಅನುದಾನಿತ) ಬಜಪೆ, ಮಂಗಳೂರು