August 30: ಮಕ್ಕಳ ಸರ್ವತೋಮುಖ ಬೆಳವಣಿಗೆಯ ಧ್ಯೇಯವನಿಟ್ಟುಕೊಂಡು ಶೈಕ್ಷಣಿಕ ಸೇವೆಗೈಯುತ್ತಿರುವ ನಮ್ಮ ಬೆಥನಿ ಪ್ರೌಢ ಶಾಲೆಯಲ್ಲಿ ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರಲು ಇರುವಂತಹ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದು ಇಲ್ಲಿನ ವಿಶೇಷವಾಗಿದೆ.

ಅಂತಹ ಒಂದು ಸುವರ್ಣ ಅವಕಾಶ “ಚಿಣ್ಣರ ಚಿತ್ರ ಚಿತ್ತಾರ ರಾಷ್ಟ್ರಮಟ್ಟದ ಮಕ್ಕಳ ಚಿತ್ರಕಲೋತ್ಸವ, ಬಣ್ಣದ ಮನೆ ಸಾಂಸ್ಕøತಿಕ ವೇದಿಕೆ ಗದಗ” ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಬಾಲ್ಯ ಜೀವನ ಸೊಸೈಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಚಿಣ್ಣರ ಚಿತ್ರ ಚಿತ್ತಾರದ 2023-24ನೇ ಸಾಲಿನ ಸ್ಪರ್ಧೆ ನಡೆಸಿತ್ತು. ಅದರಲ್ಲಿ ಸುಮಾರು 2.5 ಲಕ್ಷ ವಿದ್ಯಾರ್ಥಿಗಳು ದೇಶದ ವಿವಿದೆಡೆಗಳಿಂದ ಭಾಗವಹಿಸಿದ್ದರು. ಅದರಲ್ಲಿ ನಮ್ಮ ಶಾಲೆಯ 69 ವಿದ್ಯಾರ್ಥಿಗಳು ಆ ಸ್ಪರ್ಧೆಯಲ್ಲಿ ಭಾಗವಹಿಸಿ ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರವನ್ನು ಪಡೆದಿದ್ದಾರೆ. ಅದರಲ್ಲಿಯೂ 10ನೇ ತರಗತಿಯ ಕುಮಾರಿ ಭಾಗಮ್ಮ ಎಂಬ ವಿದ್ಯಾರ್ಥಿನಿ 2.5 ಲಕ್ಷ ಜನರಲ್ಲಿ ಆಯ್ಕೆಯಾದ ಉತ್ತಮ ಕಲೆಗಾಗಿ ಕೇವಲ 500 ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದ್ದು, ನಮ್ಮ ಶಾಲೆಗೆ ಹೆಮ್ಮೆಯ ವಿಷಯವಾಗಿದೆ. ಸ್ಪರ್ಧೆಗಳಲ್ಲಿ ಸೋಲು ಕಂಡರೂ ಪರವಾಗಿಲ್ಲ, ಭಾಗವಹಿಸುವಿಕೆ, ಮುಖ್ಯ ಎಂಬ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕವಿತಾರವರ ಪ್ರೇರಣೆಯಿಂದ ಅವಳಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ, ಚಿತ್ರಕಲಾ ಶಿಕ್ಷಕರಾದ ಶ್ರೀಯುತ ಸಾಬಣ್ಣ ಸರ್ ಅವರ ಪ್ರಯತ್ನದ ಫಲವಾಗಿ 69 ಮಕ್ಕಳಲ್ಲಿ ಕ್ರಿಯಾತ್ಮಕ, ಸೃಜನಾತ್ಮಕ ಮನೋಭಾವವನ್ನು ತುಂಬಿ ರಾಷ್ಟ್ರಮಟ್ಟದವರೆಗೆ ನಮ್ಮ ಶಾಲೆಯ ಕೀರ್ತಿ ಪತಾಕೆ ಹಾರಿದ್ದು ಶ್ಲಾಘನೀಯವಾಗಿದೆ.

‘ವಿದ್ಯೆಗೆ ವಿನಯವೇ ಭೂಷಣ’ ಎಂಬಂತೆ ಕುಮಾರಿ ಭಾಗಮ್ಮ ತಮ್ಮ ತಂದೆ-ತಾಯಿ ಮತ್ತು ತಾನು ಪಡೆದ ಪ್ರಶಸ್ತಿಯ ಜೊತೆಗೆ ಶಾಲೆಗೆ ಎಲ್ಲ ಶಿಕ್ಷಕರ ಆಶೀರ್ವಾದ ತೆಗೆದುಕೊಂಡಿದ್ದು, ಮಕ್ಕಳಲ್ಲಿರುವ ಮೌಲ್ಯಗಳನ್ನು ಎತ್ತಿ ತೋರಿಸುವಂತಹದ್ದು. ಅದೇ ರೀತಿಯಾಗಿ ಮಕ್ಕಳ ಯಶಸ್ಸಿನಲ್ಲಿ ಸಂತೋಷ ಪಡುವ ಸಿಸ್ಟರ್ ಕವಿತಾರವರು ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವಂತೆ ಅವರೆಲ್ಲರೆದುರು ಕುಮಾರಿ ಭಾಗಮ್ಮ ಅವಳಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಕಿರುಕಾಣಿಕೆಯನ್ನು ನೀಡದ್ದು ಅವರ ಔದಾರ್ಯಕ್ಕೆ ಒಂದು ನಿದರ್ಶನವೇ ಸರಿ.

 

 

 

 

 

ಸಿಸ್ಟರ್ ಕವಿತಾ, ಮುಖ್ಯೋಪಾಧ್ಯಾಯಿನಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]