Sep 02: ರೋಸಾ ಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆ, ಕಿನ್ನಿಕಂಬಳ ಮಂಗಳೂರು ಇಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಆಚರಣೆಯು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಇದರ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಲವೀನ ಲೋಬೊ ರವರು ಮಾತನಾಡಿ ಪ್ರಸ್ತುತ ಭಾರತದಲ್ಲಿ ನಾವೆ ಸ್ವತಂತ್ರರು ಎಂಬುದನ್ನು ನಾವೆಲ್ಲರು ಆತ್ಮಅವಲೋಕನ ನಡೆಸಬೇಕು, ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪಣತೊಡಬೇಕು ಎಂಬ ಚಿಂತನೆಯ ಮಾತುಗಳೊಂದಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ 63 ಮಂದಿ ಪ್ರಶಿಕ್ಷಣರ್ಥಿಗಳು ಉಪನ್ಯಾಸಕರು, ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಪ್ರಥಮ ಡಿ. ಇಲ್. ಇಡಿ ವಿದ್ಯಾರ್ಥಿ ಶಿಕ್ಷಕಿ ಶ್ರೀಮತಿ ಭವ್ಯಮಯ್ಯ ಸ್ವಾಗತಿಸಿದರು, ವಿದ್ಯಾರ್ಥಿ ಶಿಕ್ಷಕಿ ಶ್ರೀಮತಿ ಶಿಫಾರವರು ವಂದಿಸಿದರು ವಿದ್ಯಾರ್ಥಿ ಶಿಕ್ಷಕಿ ಶ್ರೀಮತಿ ರೋಸ್ಲಿನ್ ರವರು ಕಾರ್ಯಕ್ರಮ ನಿರೂಪಿಸಿರದು.

 

ಶ್ರೀಮತಿ ಲವೀನ ಲೋಬೊ, ಪ್ರಾಂಶುಪಾಲರು
ರೋಸಾ ಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆ, ಕಿನ್ನಿಕಂಬಳ 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]