Nov 02: ವಾಮಂಜೂರಿನ ಅನುದಾನಿತ ಸೈಂಟ್ ರೇಮಂಡ್ಸ್ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ರಾಜ್ಯೋತ್ಸವ ಸಂಭ್ರಮ 2017 ಎಂಬ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು. ಶಾಲಾ ಸಾಹಿತ್ಯ ಮತ್ತು ಲಲಿತಕಲಾ ಸಂಘದವರು ಸಾದರ ಪಡಿಸಿದ ಕಾರ್ಯಕ್ರಮದಲ್ಲಿ ಮೂರು ವಿಭಿನ್ನ ಕೃತಿಗಳು ಅನಾವರಣಗೊಂಡವು. ಶಿಕ್ಷಕ ಶ್ರೀ. ರಿಚರ್ಡ್ ಅಲ್ವಾರಿಸ್ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಶಾಲಾ ಮಾಸಿಕ ಸಂಚಿಕೆ ಸುದ್ಧಿ ಸಿಂಧು ಈ ಬಾರಿ ಕನ್ನಡ ರಾಜ್ಯೋೀತ್ಸವ ವಿಶೇಷಾಂಕವಾಗಿ ರೂಪುಗೊಂಡು ಶಿಕ್ಷಕಿ ಸಿ| ಟ್ರೆಶ್ಶಿಯಾನ್ ಅವರಿಂದ ಬಿಡುಗಡೆಗೊಂಡಿತು. ಶಿಕ್ಷಕ ರಾಂ ಎಲ್ಲಂಗಳ ಅವರು ಬರೆದ ಮಕ್ಕಳ ನಾಟಕ ಗುಚ್ಛ ‘ಅಮೃತ ವೃಕ್ಷ’ವನ್ನು ಮುಖ್ಯ ಅತಿಥಿ ಬೆಥನಿ ವಿದ್ಯಾ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಕಾರ್ಯದರ್ಶಿ ಸಿ| ಮಾರಿಯೋಲಾ ಅವರು ಬಿಡುಗಡೆಗೊಳಿಸಿದರು. ಬಳಿಕ ಕೃತಿ ಹಾಗೂ ಕೃತಿಗಾರನ ಪರಿಚಯ ಮಾಡಿ ಶುಭಕೋರಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ, ಸಿ| ರೋಶನಿ ಶಾಲಾ ಸಾಹಿತ್ಯ ಮತ್ತು ಲಲಿತ ಕಲಾ ಸಂಘದ ವಾರ್ಷಿಕ ಸಂಚಿಕೆ ‘ಚಿಗುರು’ ಬಿಡುಗಡೆಗೊಳಿಸಿ ಮಾತನಾಡಿ ರಾಜ್ಯೋತ್ಸವ ಸಂದೇಶ ನೀಡಿದರು. ಸಂಚಿಕೆಯ ಸಂಪಾದಕಿ ಕುಮಾರಿ ಅನ್ಸಿಲಾ,್ಲ ಶಾಲಾ ಪತ್ರಿಕೆ ‘ಚಿಗುರು’ ಬಗ್ಗೆ ಮಾತನಾಡಿದರು. ಸಂಘದ ಅಧ್ಯಕ್ಷೆ ತೇಜಸ್ವಿನಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಜ್ಞಾ ವಂದನಾರ್ಪಣೆ ಮಾಡಿದರು. ಶಿಕ್ಷಕ ರಾಂ ಎಲ್ಲಂಗಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಸಮೂಹ ಗೀತೆ ಹಾಗೂ ಕನ್ನಡ ನಾಡು ನುಡಿ ಕುರಿತ ಗೀತರೂಪಕ ಪ್ರಸ್ತುತ ಪಡಿಸಲಾಯಿತು.
Sr Roshni BS, Headmistress
St Raymond HS, Vamanjoor