June 22: ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಸರಿಯಾಗಿ 9:30 ಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ನಮ್ಮ ಶಾಲೆಯ ದೈಹಿಕ ಶಿಕ್ಷಕರಾದ ಮಹದೇವ್‍ರವರು ಯೋಗ, ಧ್ಯಾನ, ಪ್ರಾಣಾಯಾಮ ಎಂದರೇನು? ಇವುಗಳನ್ನು ಮಾಡಬೇಕಾದ ಅನುಸರಿಸಬೇಕಾದ ಕ್ರಮಗಳೇನು? ಮತ್ತು ಇವುಗಳಿಂದಾಗುವ ಪ್ರಯೋಜನಗಳೇನು? ಎಂಬುದನ್ನು ಸವಿವರವಾಗಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.

ಮಕ್ಕಳೇಲ್ಲರೂ ಯೋಗ ಮಾಡಲು ಸಿದ್ಧಗೊಂಡು ಮೊದಲಿಗೆ ಪ್ರಾರ್ಥನೆ, ಶಾಂತಿ ಮಂತ್ರ, ಗುರುಸ್ತುತಿ, ಯೋಗ ಮಂತ್ರ ದೊಂದಿಗೆ ಪ್ರಾರಂಭ ಮಾಡಲಾಯಿತು ನಂತರ ಉಸಿರಾಟ ಕ್ರಿಯೆಗಳಾದ ಉದರ ಶ್ವಾಸ, ಉರಃಶ್ವಾಸ, ಗ್ರೀವಶ್ವಾಸ, ಪೂರ್ಣ ಶ್ವಾಸ, ಮಾರ್ಜಾಲ ಶ್ವಾಸ, ಶ್ವಾನಶ್ವಾಸ, ಕಠಿ ಶ್ವಾಸಗಳನ್ನು ಮಾಡಿಸಿ ನಂತರ ಕ್ರಿಯಾತ್ಮಕ ವ್ಯಾಯಾಮಗಳಾದ ಸಂಧಿ ವ್ಯಾಯಾಮಗಳು, ಮೊಣಕೈ ಮತ್ತು ತೋಳಿನ ವ್ಯಾಯಾಮ, ಕಣ್ಣಿನ ವ್ಯಾಯಾಮ, ಪಾದಂಗುಲಿ, ಪಾದಚಾಲನೆ, ನಿಂತಲೆ ಓಟ ಮಾಡಿಸಿ ಸೂರ್ಯ ನಮಸ್ಕಾರ ಮಾಡಿಸುವ ಮೂಲಕ ಆಸನಗಳನ್ನು ಪ್ರಾರಂಭಿಸಲಾಯಿತು.


ಮೊದಲಿಗೆ ನಿಂತು ಮಾಡುವ ಆಸನಗಳಾದ ತಾಡಾಸನ, ಅರ್ಧಕಠಿ ಚಕ್ರಾಸನ, ಉತ್ತಿತ ತ್ರಿಕೋನಾಸನ, ವೃಕ್ಷಾಸನ, ವೀರಭದ್ರಾಸನ ನಂತರ ಕುಳಿತು ಮಾಡುವ ಆಸನಗಳಾದ ವಜ್ರಾಸನ, ಪಧ್ಮಾಸನ, ಬದ್ಧಕೋನಾಸನ, ವೀರಾಸನ ನಂತರ ಮುಂದೆ ಭಾಗಿ ಮಾಡುವ ಪಶ್ಚಿಮೊತ್ತಾಸನ, ಜಾನೋ ಶಿರ್ಷಸನ ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳಾದ ಮೇರು ದಂಡಸನ, ನವಸನ, ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನಗಳಾದ, ಭುಜಂಗಾಸನ, ಧರ್ನುಆಸನಗಳನ್ನು ಮಾಡಿಸಿ ಶವಾಸನ ಮಾಡಿಸಿ ಶಾಂತಿ ಮಂತ್ರದೊಂದಿಗೆ ಮುಕ್ತಾಯ ಮಾಡಲಾಯಿತು. ಅಂತಿಮವಾಗಿ ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬೆಟ್ಟಿ ಡಿ ಕೋಸ್ಟರವರು ಮಕ್ಕಳಿಗೆ ಯೋಗ ದಿನ ಒಂದು ದಿನದ ಆಚರಣೆಯಾಗಬಾರದು ಇದನ್ನು ದಿನ ನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಮಕ್ಕಳಿಗೆ ಹಿತವಚನ ನೀಡಿದರು.       

 

 

 

 

 

 

 

ಶ್ರೀ. ಮಹದೇವ್, ದೈಹಿಕ ಶಿಕ್ಷಕರು
ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]