July 23: ಸಾಮಾಜಿಕ ಸೇವೆ ಶಿಕ್ಷಣ ಕ್ರಾಂತಿಯ ಹರಿಕಾರ ದೇವರ ಸೇವಕ ಪರಮಪೂಜ್ಯ ಫಾ| ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‍ರವರು ಸ್ಥಾಪಿಸಿ ಬೆಳೆಸಿ ವಿಶ್ವದೆಲ್ಲೆಡೆ ವಿಸ್ತರಿಸಿದ ಬೆಥನಿ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಭಗಿನಿ ಸಾಧನಾರವರು, ಬಡವರು, ಶೋಷಿತರು, ಅಸಹಾಯಕರ ಬದುಕಿನ ಆಶಾಕಿರಣವಾಗಿ ಪೂಜ್ಯ ರೇಮಂಡರು ಸಲ್ಲಿಸಿದ ಸೇವೆ ಅನನ್ಯವಾದುದು. ಅವರ ಮಾರ್ಗದರ್ಶನ, ಆಶೀರ್ವಾದದ ನೆರಳನ್ನು ಪಡೆದ ನಾವೆಲ್ಲರು ಧನ್ಯರು ಎಂಬುದಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಫಾದರ್ ರೈಮಂಡರ ಜೀವನ ದರ್ಶನವನ್ನು ಪರಿಚಯಿಸುವ ನೃತ್ಯರೂಪಕವನ್ನು ವಿದ್ಯಾರ್ಥಿಗಳು ಅಭಿನಯಿಸಿ ಪೂಜ್ಯ ಗುರುವಿನ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಲಾಯಿತು. ಸಂಗೀತ ಕ್ಲಬ್‍ನ ವಿದ್ಯಾರ್ಥಿಗಳು ಗುರುವಿನ ಗುಣಗಾನದೊಂದಿಗೆ ಪ್ರಾರ್ಥನಾ ಕಾರ್ಯವನ್ನು ನೆರವೇರಿಸಿಕೊಟ್ಟರು. ಈ ಸಂದರ್ಭ ಭಗಿನಿ ಜಾಸ್ಮಿನ್ ಹಾಗೂ ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಣಾಮ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ವಂದಿಸಿದರು.
ಭಗಿನಿ ಸಾಧನಾ, ಪ್ರಾಂಶುಪಾಲ
ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು, ವಾಮಂಜೂರು