July 23: ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ ಜಿ. ಕಲಬುರಗಿದಲ್ಲಿ ಎಸ್.ಎಸ್.ಎಲ್.ಸಿ 2018-19ನೇ ಸಾಲಿನ ವಿದ್ಯಾರ್ಥಿಗಳ ಪಾಲಕ-ಪೋಷಕರ ಸಭೆಯನ್ನು ದಿನಾಂಕ 21.07.2018ರಂದು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯ ಅಧ್ಯಕ್ಷಸ್ಥಾನವನ್ನು ಮುಖ್ಯೋಪಾಧ್ಯಾಯಿನಿ ಸಿ. ಕವಿತಾ ಬಿಎಸ್ ಅವರು ವಹಿಸಿಕೊಂಡಿದ್ದರು. ಈ ಸಭೆಗೆ ಮುಖ್ಯ ಅತಿಥಿಗಳಾಗಿ ವಂ. ಫಾದರ ಜಾರ್ಜ ಲೋಬೊ ಹಾಗೂ ಉಪನ್ಯಾಸಕರಾಗಿ ಜ್ಯೋತಿ ಸೇವಾ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಸಿ. ಲೂಸಿ ಪ್ರೀಯಾ ಆಗಮಿಸಿದ್ದರು.
ಈ ಸಭೆಯನ್ನು ಕುರಿತು ವಂ.ಫಾದರ ಜಾರ್ಜ ಲೋಬೊರವರು ಹತ್ತನೇ ತರಗತಿಗಳ ವಿದ್ಯಾರ್ಥಿಗಳ ಪಾಲಕರಿಗೆ ತಮ್ಮ ವiಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡುವಂತೆ ಹಾಗೂ ಮಕ್ಕಳಲ್ಲಿ ನೈತಿಕತೆ ಬೆಳೆಸುವಂತೆ ಕರೆಕೊಟ್ಟರು. ನಂತರ ಕಾರ್ಯಕ್ರಮದ ಉಪನ್ಯಾಸಕರಾದ ಸಿ. ಲೂಸಿ ಪ್ರೀಯಾರವರು, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರದ ಬಗ್ಗೆ ವಿವರಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಹಾಗು ಅವರನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಹಾಗೂ ಪಾಲಕರ ಜವಾಬ್ದಾರಿ ಮುಖ್ಯವಾದುದು ಎಂದು ಹೇಳಿದರು.
ದಿ.12.07.2018ರಂದು 9ನೇ ತರಗತಿಯ ಪಾಲಕ-ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಶ್ರೀ ಬಸವರಾಜ ಪೂಜಾರಿ ಸಹ ಶಿಕ್ಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಜವಬ್ದಾರಿಗಳ ಬಗ್ಗೆ ಹೇಳಿದರು. ಈ ಕಾರ್ಯಕ್ರಮವನ್ನು ಶ್ರೀಯುತ ವಿಶ್ವನಾಥ ಸಹ ಶಿಕ್ಷಕರು ನಿರೂಪಿಸದರು.
ಶ್ರೀಯುತ ದೇವಿಂದ್ರಪ್ಪಾ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ