ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸೇವಾ ವೃತ್ತಿಯಿಂದ ನಿವೃತ್ತರಾದ ಶ್ರೀಮತಿ. ಪಾವ್ಲಿನ್ ಡಿಸೋಜ, ಜೂಲಿಯಾನ ಕಾರ್ಡೋಜಾ, ಬೆನ್ನಿ ಫೆರ್ನಾಂಡಿಸ್ ಇವರ ಸನ್ಮಾನ ವಿದಾಯ ಸಮಾರಂಭವು ದಿನಾಂಕ 05-12-2020 ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಈ ಅಪೂರ್ವ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬೆಥನಿ ಮಂಗಳೂರು ಪ್ರಾಂತೀಯ ಶಿಕ್ಷಣ ಸಂಯೋಜಕಿಯಾದ ವಂ. ಭ. ಶುಭರವರು ಅಲಂಕರಿಸಿದ್ದರು. ಸ್ಥಳೀಯ ಶಿಕ್ಷಣ ಸಂಸ್ಥೆಗಳ ಮ್ಯಾನೇಜರ್ ವಂ.ಭ.ಜೂಲಿಯಾನ ಮೋನಿಸ್, ಸಂಚಾಲಕಿ ವಂ.ಭ. ಮಾರಿಬೆಲ್, ಬದ್ರಿಯಾ ಕ್ಲಸ್ಟರಿನ ಸಿ.ಆರ್.ಪಿ ಶ್ರೀಮತಿ ಶೀಲಾವತಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ, ಶ್ರೀಮತಿ ಜಯಂತಿ ಹಾಗೂ ಸನ್ಮಾನಿತರ ಕುಟುಂಬದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಸ್ಥೆ ವಂ.ಭ. ಲಿಲ್ಲಿಯವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಶುಭ ಕೋರಿದರು. ಬಳಿಕ ಮೂವರು ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರು ತಮ್ಮ 40 ವರುಷಗಳ ಸೇವಾವಧಿಯ ಸುಂದರ ನೆನಪುಗಳನ್ನು ಮೆಲುಕು ಹಾಕಿ ಎಲ್ಲರಿನ್ನೂ ವಂದಿಸಿದರು. ಅಧ್ಯಕ್ಷರು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿತರಿಗೆ ಶುಭ ಹಾರೈಸಿ, ಮುಂದಿನ ಜೀವನದಲ್ಲಿ “No Tension Only Pension” ಎಂಬ ಕಿವಿ ಮಾತನ್ನು ಹೇಳಿದರು.
ಸಹ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಶ್ರೀಮತಿ ಲೀನಾ ಲಿಲ್ಲಿ ಪಿಂಟೊ, ಸಹಶಿಕ್ಷಕಿ
ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ