ಪಶ್ಚಿಮ ಘಟ್ಟದ ಮೇಲೆ, ಬಯಲು ಸೀಮೆಯ ಆರಂಭದಲ್ಲಿ ಪುನೀತ ರೆ|| ಮಸ್ಕರೇನಸ್‍ರವರ ಪಾದಸ್ಪರ್ಶ ಗ್ರಾಮ ಗಾಡೇನಹಳ್ಳಿ.
ಬೆಥನಿ ಸಂಸ್ಥೆ ದೇವರು R.F.C. ಮಸ್ಕರೇನಸ್‍ರವರ ಮೂಲಕ ನಮಗೆ ನೀಡಿದ ಕೊಡುಗೆ. ಇಂತಹ ಮೌಲ್ಯಭರಿತ ಸಂಸ್ಥೆಯಲ್ಲಿ ಶಿಕ್ಷಣ ನೀಡುತ್ತಿರುವ ಲೊಯೋಲಾ ಪ್ರೌಢಶಾಲೆಯಲ್ಲಿ 31 ವಸಂತಗಳು, ಬೆಥನಿ ವಿದ್ಯಾಸಂಸ್ಥೆಯಲ್ಲಿ 35 ಸಂವತ್ಸರಗಳ ಕಾಲ ಶ್ರೀಯುತ ವಿಜೇಂದ್ರರಾವ್ A.V. ಯವರು ದೈಹಿಕ ಶಿಕ್ಷಣ ಶಿಕ್ಷಕರಾಗಿ ಸಾರ್ಥಕ ಜೀವನ ನಡೆಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಮಕ್ಕಳನ್ನು ತೊಡಗಿಸಿ ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ನಮ್ಮ ಮಕ್ಕಳು ಬೆಳಗುವಂತೆ ಮಾಡಿ, ಜೊತೆಗೆ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜ್ಞಾನಧಾರೆ ಎರೆದಿದ್ದಾರೆ. ಇವರ ಅನುಪಮ ಸೇವೆಗೆ ದೈಹಿಕ ಶಿಕ್ಷಣ ಪ್ರಶಸ್ತಿ, ಅತ್ತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿಗಳು ಲಭ್ಯವಾಗಿವೆ.
ಇವರ ಅನುಪಮ ಸೇವೆಯನ್ನು ಸ್ಮರಿಸಿ ದಿನಾಂಕ 01-08-2023 ರಂದು ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭಕ್ಕೆ ಪ್ರಾಂತ್ಯಾಧಿಕಾರಿಣಿಯವರ ಪರವಾಗಿ ಸಿಸ್ಟರ್ ವಿನ್ನಿಫ್ರೆಡ್, ಶಾಲೆಯ ಸಂಚಾಲಕರಾದ ಸಿಸ್ಟರ್ ಲುವೀಶಿಯ ಹಾಗೂ ಮುಖ್ಯೋಪಾದ್ಯಾಯಿನಿ ಸಿಸ್ಟರ್ ಶಾಲಿನಿ, ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ರಂಜಿತಾ, ಹಾಗೂ ಶಾಲಾ ಸಿಬ್ಬಂಧಿ ವರ್ಗ, ಜೊತೆಗೆ ಗ್ರಾಮದ ಗಣ್ಯರು, ಅಪಾರ ಶಿಷ್ಯವೃಂದದ ಸಮ್ಮುಖದಲ್ಲಿ ಅದ್ದೂರಿ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಶ್ರೀಯುತ ಅಂತೋಣ ಫ್ರಾನ್ಸಿಸ್
ಲೊಯೊಲಾ ಪ್ರೌಢಶಾಲೆ, ಗಾಡೇನಹಳ್ಳಿ