ದಿನಾಂಕ 19.06.2024 ಬುಧವಾರದಂದು ಬೆಳಿಗ್ಗೆ 10.30ಕ್ಕೆ ಸರಿಯಾಗಿ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆ ಮುಲ್ಕಿಯ ಸಭಾಂಗಣದಲ್ಲಿ ಸುಮಾರು 40 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಅವಿರತವಾಗಿ ದುಡಿದ ಶ್ರೀಮತಿ ರೊಸಲಿನ್ ಮೊನಿಸ್ ರವರ ವಿದಾಯ ಸನ್ಮಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಥನಿ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯಾದ ವಂದನೀಯ ಭಗಿನಿ ಡಾ. ಲಿಲ್ಲಿ ಪಿರೇರಾರವರು ವಹಿಸಿದ್ದರು. ಮುಲ್ಕಿ ಸ್ಥಳೀಯ ಚರ್ಚಿನ ಧರ್ಮಗುರುಗಳಾದ ಫಾದರ್ ಆಂಟನಿ ಶೆರಾರವರು ನಿವೃತ್ತ ಶಿಕ್ಷಕಿಗೆ ಆಶೀರ್ವಚನ ಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕರಾದ ವಂದನೀಯ ಭಗಿನಿ. ಡಾ. ಮಾರಿಯೋಲ ಬಿ.ಎಸ್, ಮೆಡಲಿನ್ ಕಾನ್ವೇಂಟಿನ ಮುಖ್ಯಸ್ಥೆ ವಂದನೀಯ ಭಗಿನಿ ಮೀನಬಿ.ಎಸ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ.ಶ್ರೀಕಾಂತ್ ಭಟ್, ನಿವೃತ್ತ ಶಿಕ್ಷಕಿಯ ಪತಿಯಾದ ಶ್ರೀಮಾನ್ ರಫಾಯಲ್ ಪಿಂಟೋ ಆಗಮಿಸಿದ್ದರು.

ಕಾರ್ಯಕ್ರಮಕ್ಕೆ ಬಂದ ಎಲ್ಲರನ್ನೂ ಶಾಲಾ ಮುಖ್ಯೋಪಾಧ್ಯಾಯಿನಿ ವಂದನೀಯ ಭಗಿನಿ ಪ್ರೆಸಿಲ್ಲಾ ಪೆÇ್ಲೀರಿ ಡಿಸೋಜರವರು ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಲವೀನ ಜೋಯ್ಸ್ ರೊಡ್ರಿಗಸ್ ರವರು ಕಾರ್ಯಕ್ರಮ ನಿರೂಪಿಸಿದರು. ಪ್ರಾರ್ಥನೆಯನ್ನು, ಸ್ವಾಗತ ನೃತ್ಯವನ್ನು ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು, ತದನಂತರ ಶಿಕ್ಷಕಿ ರೋಸಲಿನ್ ಮೊನಿಸ್ ರವರಿಗೆ ಬೆಥನಿ ಸಂಸ್ಥೆಯ ವತಿಯಿಂದ, ಶಾಲಾ ವತಿವಯಿಂದ, ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಹಾಗೂ ಅವರ ಹಿರಿಯ ವಿದ್ಯಾರ್ಥಿಗಳಿಂದ, ಅಭಿಮಾನಿಗಳಿಂದ ಸನ್ಮಾನ ಕಾರ್ಯಕ್ರಮ ನೆರವೇರಿತು. ಬಂದಂತಹ ಸರ್ವರನ್ನು ಶ್ರೀಮತಿ ತಿಲಕರವರು ವಂದಿಸಿದರು. ನಂತರ ಎಲ್ಲರಿಗೂ ಭೋಜನಾ ಸತ್ಕಾರವನ್ನು ನಿವೃತ್ತ ಶಿಕ್ಷಕಿ ರೊಸಲಿನ್ ಮೊನಿಸ್ ರವರು ಏರ್ಪಡಿಸಿದ್ದರು.

 

 

 

 

 

 

 

ಸಿಸ್ಟರ್ ಪ್ರೆಸಿಲ್ಲಾ ಪೆÇ್ಲೀರಿ ಡಿಸೋಜ, ಮುಖ್ಯೋಪಾಧ್ಯಾಯಿನಿ
ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆ, ಮುಲ್ಕಿ 

 

 

 

 

 

 

strong>

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : adminhq@besmangalore.org