ಶ್ರೀಮತಿ ಐರಿನ್ ಸ್ಟೆಲ್ಲಾ ಡಿಸೋಜರವರು ಕ್ಯಾಥೋಲಿಕ್ ಬೋರ್ಡ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಹಲವು ಶಾಲೆಗಳಲ್ಲಿ 39 ವರ್ಷಗಳ ಕಾಲ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ, ಶಾಲೆ ಕಿನ್ನಿಕಂಬಳ ಇಲ್ಲಿ ವಯೋನಿವೃತ್ತಿಯನ್ನು ಹೊಂದಿ ನವೆಂಬರ್ 30 ರಂದು ಬೀಳ್ಕೊಡಲಾಯಿತು. ವಾದ್ಯಾ ಮೇಳದೊಂದಿಗೆ ವಿದ್ಯಾರ್ಥಿಗಳು ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿಕೊಂಡರು. ವಿವಿಧ ಗ್ರಂಥಗಳಿಂದ ಆಯ್ದ ದೇವರ ವಾಕ್ಯಗಳು ಹಾಗೂ ಪ್ರಾರ್ಥನಾ ನೃತ್ಯದ ಮೂಲಕ ದೇವರ ಕೃಪೆಯನ್ನು ಕಾರ್ಯಕ್ರಮದ ಮೇಲೆ ಬೇಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ಸ್ವಾಗತ ನೃತ್ಯ, ಗುರುವಂದನಾ ಕಾರ್ಯಕ್ರಮದ ಮೂಲಕ ಶಿಕ್ಷಕಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾದ್ಯಾಯಿನಿ ಭಗಿನಿ ಲಿಲ್ಲಿ ಡಿಸೋಜರವರು ನೆರೆದ ಸರ್ವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿದರು.
ಬೆಥನಿ ಆಡಳಿತ ಮಂಡಳಿ ವತಿಯಿಂದ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ವ! ಡಾ!ಸಿಸ್ಟರ್ ಮಾರಿಯೋಲಾ ಬಿ. ಎಸ್. ಶಾಲಾ ಸಂಚಾಲಕಿ, ಸ್ಥಳೀಯ ಕಾನ್ವೆಂಟಿನ ಸುಪೀರಿಯರ್, ಮುಖ್ಯೋಪಾಧ್ಯಾಯಿನಿ, ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷೆ ಸನ್ಮಾನಿತರ ಕುಟುಂಬದವರು, ಕರ್ನಾಟಕ ರಾಜ್ಯ ಅನುದಾನಿತ ನೌಕರರ ಸಂಘದ ಮಂಗಳೂರು ವಲಯದ ಪದಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್,ಆರ್. ಈಶ್ವರ್, ಬದ್ರಿಯಾ ನಗರ ಕ್ಲಸ್ಟರಿನ ಸಿ. ಆರ್.ಪಿ ಶ್ರೀಮತಿ ಶೀಲಾವತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇವರ ವೃತ್ತಿ ನಿಷ್ಠೆ, ನಿಸ್ವಾರ್ಥಸೇವೆ , ಮಕ್ಕಳ ಮೇಲಿನ ಮಮತೆ, ಪ್ರೀತಿ ಆಡಳಿತ ಮಂಡಳಿಯ ಮೇಲಿರುವ ವಿಶ್ವಾಸ , ಅಚಲಶಕ್ತಿ, ಏಕಾಗ್ರತೆ, ನಾಜೂಕುತನ ಸಮಯ ಮುಕ್ತ ಕಂಠದಿಂದ ಅಧ್ಯಕ್ಷರು ಶ್ಲಾಘಿಸಿದರು. ಅವರ ಸೇವೆಯನ್ನು ಹೃದಯಾಂತರಾಳದಿಂದ ಸ್ಮರಿಸಿ ಮುಂದಿನ ಜೀವನವೂ ಸುಖಮಯ ವಾಗಲಿ ಎಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಶಾಲಾ ಸಂಚಾಲಕಿ ಭ!.ರೋಸ್‍ಲೀಟಾ ಬಿ.ಎಸ್ ಬೆಥನಿ ಎಜ್ಯುಕೇಶನ್ ಸೊಸೈಟಿ ಪರವಾಗಿ ಸನ್ಮಾನ ಪತ್ರ ವಾಚಿಸಿದರು.
ಶಿಕ್ಷಕಿ ತಮ್ಮ 39 ವರ್ಷಗಳ ಸೇವಾವಧಿ ಸವಿನೆಪುಗಳನ್ನು ಮೆಲುಕು ಹಾಕುತ್ತಾ ಮಕ್ಕಳ ಓದಿನ ಕಡೆಗೆ ಹೆಚ್ಚಿನ ಗಮನಕೊಟ್ಟು ಸಮಾಜದಲ್ಲಿ ಒಟ್ಟು ಜವಾಬ್ದಾರಿಯುತ ಪ್ರಜೆಯಾಗಬೇಕು ಎಂಬ ಕಿವಿಮಾತನ್ನು ನೀಡಿದರು.
ಸಿಸ್ಟರ್ ವಿನಯ ಕಿಶೋರಿ ಅರಾನ್ಹ
ರೋಸಾ ಮಿಸ್ತಿಕಾ ಶಾಲೆ ಕಿನ್ನಿಕಂಬಳ