ದಿನಾಂಕ 3-01-2017 ರಿಂದ 06-01-2017 ರವರೆಗೆ ಸ್ಕೂಲ್ ಗೇಮ್ಸ್ ಫೆಡರೇಷನ ಆಫ್ ಇಂಡಿಯಾ (S.G.F.I) ವತಿಯಿಂದ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ 2016-17 ನೇ ಸಾಲಿನ ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಪ್ರೌಢಶಾಲಾ ವಿದ್ಯಾರ್ಥಿಗಳ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯು ತಮಿಳುನಾಡಿನ ತಿರುಚನಾಪಲ್ಲಿಯಲ್ಲಿ ನಡೆದಿತ್ತು. ಈ ಪಂದ್ಯಾವಳಿಯಲ್ಲಿ ಆವೆ ಮರಿಯಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಚಂದನಾ ಆರ್. ಇವಳು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಬಂಗಾರದ ಪದಕಕ್ಕೆ ಭಾಜನರಾಗಿರುತ್ತಾಳೆ. ಹಾಗೂ ಕೇರಳದ ಇರ್ನಾಕುಲಂ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲೂ ಕೂಡ ದ್ವಿತೀಯ ಸ್ಥಾನ ಪಡೆದಿರುವ ಸಾಧನೆ ಮಾಡಿರುತ್ತಾಳೆ. ಹಾಗೂ ಈ ವಿದ್ಯಾರ್ಥಿನಿ 2014-15 ನೇ ಸಾಲಿನ 14 ವರ್ಷ ವಯೋಮಿತಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲೂ ಕೂಡ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಇವಳ ಈ ಸಾಧನೆಯನ್ನು ಪರಿಗಣಿಸಿ ತಾಲೂಕಾ ಗಣರಾಜ್ಯೋತ್ಸವ ಸನ್ಮಾನ ಸಮಿತಿಯು ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಶಿರಸಿ ತಾಲೂಕಾ ಗಣ್ಯರು ಹಾಗೂ ನಾಗರಿಕರ ಸಮ್ಮೂಕದಲ್ಲಿ ಇವಳನ್ನ ಸನ್ಮಾನಿಸಿ ಗೌರವಿಸಿದ್ದಾರೆ.
Headmistress, Ave Maria HS, Sirsi