June 24 : “ನಾಯಕರೆಂದರೆ ಅವರೊಂದು ವ್ಯಕ್ತಿಯಲ್ಲ ದೊಡ್ಡ ಶಕ್ತಿ” “ಉತ್ತಮ ನಾಯಕರಿಂದ ಉತ್ತಮ ಸಮಾಜ ನಿರ್ಮಾಣ” ಎಂಬ ವಾಕ್ಯದಂತೆ 2022-23 ನೇ ಸಾಲಿನಲ್ಲಿ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂತ್ರಿಮಂಡಲದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು. “ಭಾವಿ ನಾಯಕರಿಗೆ ಸಾಧಕರು ಪ್ರೇರಕರಾಗಲಿ” ಎಂಬ ಉದ್ದೇಶದಿಂದ ಚಿತ್ತಾಪುರ ಪೆÇಲೀಸ ಇನ್ಸ್‍ಪೆಕ್ಟರ್ ಆಗಿರುವ ಎ ಎಸ್ ಪಟೇಲ, ಹಾಗೂ ಚಿತ್ತಾಪುರಿನ ಅಗ್ನಿ ಶಾಮಕದಳದ ಮುಖ್ಯಸ್ಥರಾಗಿರುವ ಶ್ರೀಯುತ ಮುಸ್ತಾಕ ಪಟೇಲ್ ಹಾಗೂ ಶಾಲಾ ಸಂಚಾಲಕಿ ಭಗಿನಿ ಸಿಂಥಿಯಾ ಸಿಕ್ವೇರಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ನಾಯಕನಲ್ಲಿ ಇರಬೇಕಾದ ಉತ್ತಮ ಗುಣಗಳ ಕುರಿತು ಮಾತನಾಡಿದ ಹಿರಿಯ ಅಧಿಕಾರಿಗಳ ಭಾಷಣ ಮಕ್ಕಳಿಗೆ ಪ್ರೇರಣೆ ನೀಡುವಂತಿತ್ತು. ಸರ್ವರ ಸಮ್ಮುಖದಲ್ಲಿ ಭಾವಿ ನಾಯಕರು ಸತ್ಯ ಪ್ರಮಾಣವಚನವನ್ನು ಸ್ವೀಕರಿಸುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಅಣಿಯಾದರು. ಕಾರ್ಯಸಾಧನೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಒಬ್ಬನೇ ಬಿಡಿಸುವವನು ನಾಯಕನಲ್ಲ. ನನ್ನೊಂದಿಗೆ ತನ್ನ ಸುತ್ತಲಿದ್ದವರ ಸಾಧನೆಗೆ ಸ್ಪೂರ್ತಿದಾಯಕ ರಾಗುವವರೆ ನಿಜವಾದ ನಾಯಕನಾಯಕ ಎಂಬ ಮುಖ್ಯೋಪಾಧ್ಯಾಯನಿ ಭಗಿನಿ ಅವೇಲಿನ ಅವರ ಪ್ರೆರಣಾದಾಯಕ ನುಡಿಗಳು ಮಂತ್ರಿಮಂಡಲದ ಕಾರ್ಯಗಳ ಮೇಲೆ ಬೆಳಕು ಚೆಲ್ಲುವಂತಿತ್ತು. ಭಾವಿ ನಾಯಕರ ಭವ್ಯ ಭವಿಷ್ಯತ್ತನ್ನು ಬೆಳಗುವ ಈ ಕಾರ್ಯಕ್ರಮಕ್ಕೆ ಶಿಶುವಿಹಾರ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ಬಳಗ ಶುಭ ಹಾರೈಸಿದರು.
ಭಗಿನಿ ಅನಿತಾ ಶಾಂತಿ ಬಿ ಎಸ್, ಸಹಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರ