June 24: ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿ ಪ್ರಜೆಗೆ ಮತ ಚಲಾಯಿಸುವ ಮೂಲಕ ದೇಶದ ನಾಯಕರನ್ನು ಆಯ್ಕೆ ಮಾಡುವ ಹಕ್ಕು ಇದೆ. ನಮ್ಮ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022 ಮತ್ತು 23 ನೇ ಸಾಲಿನ ಮಂತ್ರಿಮಂಡಲದ ಶಾಲಾ ನಾಯಕ ಮತ್ತು ನಾಯಕರನ್ನು ಆಯ್ಕೆ ಮಾಡುವ ಉದ್ದೇಶದಿಂದ ದಿನಾಂಕ 11.06.2022 ರಂದು ಅಣುಕು ಮತದಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಲ್ಕರಿಂದ ಏಳನೇ ತರಗತಿಯ ಎಲ್ಲ ಮಕ್ಕಳು ಬಹಳ ಉತ್ಸಾಹದಿಂದ ತಮ್ಮ ಅಮೂಲ್ಯ ಮತ ಚಲಾಯಿಸುವ ಮೂಲಕ ಅಣುಕು ಮತದಾನದ ಅನುಭವವನ್ನು ಪಡೆದರು.
“ಇಂದಿನ ಮಕ್ಕಳೇ ನಾಳಿನ ಭಾವಿ ಪ್ರಜೆಗಳು” ಎಂಬ ಅಂಶವನ್ನು ಮನದಲ್ಲಿಟ್ಟು ಪ್ರಭುದ್ಧ ನಾಯಕರನ್ನು ಆಯ್ಕೆ ಮಾಡುವ ಅವಕಾಶಕ್ಕೆ ತರಬೇತಿ ಪಡೆದುಕೊಂಡರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಾಯಕರ ಆಯ್ಕೆ ಮತದಾನದ ಮೂಲಕ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ಅವಕಾಶಗಳನ್ನು ನೀಡಲಾಯಿತು. ಸರಳ ಹಾಗೂ ವಿಭಿನ್ನವಾದ ಮತದಾನದ ಮೂಲಕ ಮಕ್ಕಳಿಗೆ ಪ್ರಜಾಪ್ರಭುತ್ವ ಹಾಗೂ ಮತದಾನದ ಮಹತ್ವ ತಿಳಿಸಿಕೊಡಲಾಯಿತು. ಈ ಮತದಾನದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಅವೆಲಿನ್, ಪ್ರಭಾರಿ ಮುಖ್ಯಗುರುಗಳಾದ ಶ್ರೀಯುತ ಶಿವಕಾಂತ ಹಾಲಗೇರಿ, ಹಾಗೂ ಗೌರವ ಶಿಕ್ಷಕ ವೃಂದದವರು ಹಾಜರಿದ್ದು ಮತದಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

 

ಶ್ರೀಮತಿ ರಾಜೇಶ್ರೀ.ಏ. ಅಲ್ಲೂರ, ಸಹಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]