May 29: 2017-18ನೇ ಸಾಲಿಗೆ ಲೊಯೊಲಾ ಆವರಣದ ಶಿಕ್ಷಕರ ಮನವನ್ನು ಶಿಕ್ಷಣದಲ್ಲಿ ಅಣಿಗೊಳಿಸಲು ಪೂರ್ವ ತಯಾರಿ ಎಂಬಂತೆ ‘ಒಂದು ದಿನದ ಶಿಕ್ಷಕರ ಕಾರ್ಯಗಾರವನ್ನು ಲೊಯೊಲಾ ಆವರಣದಲ್ಲಿ ದಿನಾಂಕ 29-05-2017 ಬೆಳ್ಳಿಗ್ಗೆ 10.00 ಗಂಟೆಗೆ ಸರಿಯಾಗಿ ಹಮ್ಮಿಕೊಳ್ಳಲಾಗಿತ್ತು. ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊಫೆಸರ್ ವೃಷಭರಾಜ್ ಜೈನ್ ಹಾಗೂ ಪ್ರೊಫೆಸರ್ ಶ್ರೀಧರ್ ಜೈನ್‍ರವರನ್ನು ಲೊಯೊಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿ ಮೇರಿಯನ್‍ರವರು ಸ್ವಾಗತಿಸುವುದರೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡೆವು. ಮಕ್ಕಳು ಮನವನು, ಮನೆಯನ್ನು ಬೆಳಗುವ ದೀಪ. ಆ ದೀಪ ನಂದಾದೀಪವಾಗಿ ಬೆಳಗಲು ಶಿಕ್ಷಕರಿಂದ ಪ್ರೀತಿ ವಿಶ್ವಾಸದ ಎಣ್ಣೆ ಹೊಯ್ಯುವ ಕೆಲಸವಾಗಬೇಕೆಂಬುದು ಸಂಪನ್ಮೂಲ ವ್ಯಕ್ತಿಯ ಅಭಿಲಾಷೆಯಾಗಿತ್ತು.


ಶ್ರೀಯುತರು ಮಾತನಾಡುತ್ತಾ ಕಲಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಬಂಧ, ವಿದ್ಯಾರ್ಥಿಗಳು ಮತ್ತು ಸಮಾಜದ ನಡುವಿನ ಸಂಬಂಧವನ್ನು ತಿಳಿಸುತ್ತಾ ಹೆತ್ತವರ ಹಾಗೂ ಶಿಕ್ಷಕರು ಸ್ವೀಕಾರ ಮನೋಭಾವ ಉಳ್ಳವರಾಗಿರಬೇಕೆಂದು, ಮಕ್ಕಳನ್ನು ವರ್ಗೀಕರಿಸದೇ ಅವರಲ್ಲಿರುವ ಆತ್ಮಕ್ಕೆ ಬೆಲೆಕೊಡಬೇಕೆಂದೂ, ಎಂದಿಗೂ ಮಕ್ಕಳನ್ನು ಹೋಲಿಕೆ ಮಾಡಬಾರದೆಂದು ನಮಗೆಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳನ್ನು ಸುಸಂಸ್ಕøತರನ್ನಾಗಿ ಮಾಡಿ ಅವರ ಭವಿಷ್ಯವನ್ನು ರೂಪಿಸುವುದು ಓರ್ವ ಪರಿಣಾಮಕಾರಿ ಶಿಕ್ಷಕನ ಉದ್ದೇಶವಾಗಿದೆ ಎಂದು ಮನದಟ್ಟಿಸಿದರು. ಲೊಯೊಲಾ ಪದವಿಪೂರ್ವ ಕಾಲೇಜಿನ ಶಿಕ್ಷಕರಾದ ಶ್ರೀ ಫ್ರಭಾಕರ್‍ರವರು ಬೆಥನಿ ವಿದ್ಯಾಸಂಸ್ಥೆ ಹಾಗು ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]