ಸಾಯುವ ಮೊದಲು
ವಿಲ್ ಬರೆಯುವ ಬದಲು
ಡೆತ್ ನೋಟಿಗಿಂತ ಮೇಲು
ಬದುಕಲ್ಲಿ ಬಂದವರಿಗೆ
ಹೇಳುವ ಧನ್ಯವಾದಗಳ ಸಾಲು !
ಸ್ವರ್ಗದಿಂದ ಧರೆಗಿಳಿಸಿದ ದೇವರು
ಧರೆಯಿಂದ ಸ್ವರ್ಗ ತೋರಿಸುವ ಗುರು
ಬದುಕಿನ ಸಾರ ಉಣಿಸಿದ ಸಂಸಾರ
ಕಷ್ಟಕ್ಕೆ ಹೆಗಲಾದ ಸ್ನೇಹಿತರು
ಸಂತೋಷ ನೀಡಿದ ಬಂಧುಗಳು
ಉಸಿರು ನೀಡಿದ ಗಾಳಿ
ಜೀವ ಕೊಟ್ಟ ನೀರು
ಚೈತನ್ಯ ಕೊಟ್ಟ ಬೆಳಕು
ಶಕ್ತಿ ನೀಡಿದ ಆಹಾರ
ಹುಟ್ಟಿಗೆ, ಬದುಕಿಗೆ, ಸಾವಿಗೆ
ಮಡಿಲಾದ ಮಾತೃ ಭೂಮಿ
ಕರುಳಿನ ಮಮತೆಗೆ
ಹೃದಯದ ಪ್ರೀತಿಗೆ
ಕಾಲೆಳೆದ ಕೈಗಳಿಗೆ
ಮತ್ಸರಿಸಿದ ಮನಸ್ಸುಗಳಿಗೆ
ಶಪಿಸಿದ ಶತ್ರುಗಳಿಗೆ
ಸಾಧನೆಯ ಏಣಿಗೆ
ಮರೆತು ಮನ್ನಿಸಿದ
ದಯಾವಂತರಿಗೆ..........
ನಿಲ್ಲುವ ಮೊದಲು
ಮಾತು...
ಹೇಳುವ ಧನ್ಯವಾದದ ಮಾತು
ಕ್ಷಮಿಸುವ ಕರುಣೆಯ ಮಾತು
ವಿದಾಯದ ಆತ್ಮೀಯ ಮಾತು
ಆತ್ಮ ಹೋಗುವ ಮೊದಲೇ
ಸ್ವರ್ಗವನ್ನೇ ಸೇರೀತು ! ! !
Violet Pinto, Lecturer
St Mary’s PU College, Arsikere